ಫೆಲೆಸ್ತೀನಿಯನ್ ದೇಶ ಸ್ಥಾಪನೆಯ ಉದ್ದೇಶಕ್ಕೆ ಬೆಂಬಲ: ಅಮೆರಿಕ
Photo: PTI
ವಾಷಿಂಗ್ಟನ್: ಅ.7ರ ದಾಳಿಯ ನಂತರ ಇಸ್ರೇಲ್ ಗೆ ದೃಢವಾದ ಬೆಂಬಲ ನೀಡಿರುವ ನಡುವೆಯೇ, ಅಮೆರಿಕದ ಅಧ್ಯಕ್ಷ ಜೋ ಬೈಡನ್ ಫೆಲೆಸ್ತೀನಿಯನ್ ದೇಶ ಸ್ಥಾಪನೆಯ ಗುರಿಯ ಬಗ್ಗೆ ಅಮೆರಿಕದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.
‘ಶಾಂತಿ ಸ್ಥಾಪನೆಯತ್ತ ನಮ್ಮ ಪ್ರಯತ್ನ ಮುಂದುವರಿಯಬೇಕು. ಶಾಂತಿ ಸ್ಥಾಪನೆಯ ಈ ಮಾರ್ಗವು ಇಸ್ರೇಲ್ ಮತ್ತು ಫೆಲೆಸ್ತೀನ್ ಇಬ್ಬರೂ ಸುರಕ್ಷಿತವಾಗಿ, ಘನತೆಯಿಂದ ಮತ್ತು ಶಾಂತಿಯಿಂದ ಬದುಕಲು ಅವಕಾಶ ಮಾಡಿಕೊಡುತ್ತದೆ. ಅಂದರೆ, ಎರಡು-ರಾಷ್ಟ್ರಗಳ ಸೂತ್ರವೇ ಈ ಸಮಸ್ಯೆಗೆ ಪರಿಹಾರ ಎಂದು ಬೈಡನ್ ಹೇಳಿದ್ದಾರೆ.
Next Story