AI ಸರ್ಟಿಫಿಕೇಟ್ ಪ್ರೋಗ್ರಾಂ ಆರಂಭಿಸಲು ಅಮೆರಿಕಾದ ಎಂಐಟಿ ಜೊತೆಗೆ ತುಂಬೆ ಇನ್ಸ್ಟಿಟ್ಯೂಟ್ ಆಫ್ ಎಐ ಇನ್ ಹೆಲ್ತ್ಕೇರ್ ಸಹಭಾಗಿತ್ವ
ಅಜ್ಮಾನ್: “ಎಐ ಇನ್ ಹೆಲ್ತ್ಕೇರ್” ಎಂಬ ವರ್ಚುವಲ್ ಕೋಸ್ ಅನ್ನು ಆರಂಭಿಸಲು ತುಂಬೆ ಇನ್ಸ್ಟಿಟ್ಯೂಟ್ ಆಫ್ ಎಐ ಇನ್ ಹೆಲ್ತ್ಕೇರ್ ಮುಂದಾಗಿದ್ದು ಇದಕ್ಕಾಗಿ ಇದಕ್ಕಾಗಿ ಅಮೆರಿಕಾದ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ MIT xPRO ಜೊತೆಗೆ ಸಹಯೋಗ ಮಾಡುತ್ತಿದೆ. ವೈದ್ಯಕೀಯ ಶಿಕ್ಷಣವನ್ನು ಇನ್ನಷ್ಟು ಉನ್ನತೀಕರಿಸಲು ಮತ್ತು ಎಐ-ಚಾಲಿತ ಆರೋಗ್ಯಸೇವಾ ಪರಿಹಾರಗಳ ಕ್ಷೇತ್ರದಲ್ಲಿ ಜ್ಞಾನವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡಲು ಈ ಕೋರ್ಸ್ ಸಹಾಯಕಾರಿಯಾಗಲಿದೆ.
ಈ ಎರಡೂ ಸಂಸ್ಥೆಗಳ ಸಹಯೋಗವು ಎಐ ಮತ್ತು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮುಂಚೂಣಿ ಸಂಸ್ಥೆಯಾಗುವ ತುಂಬೆ ಇನ್ಸ್ಟಿಟ್ಯೂಟ್ ಆಫ್ ಎಐ ಇನ್ ಹೆಲ್ತ್ಕೇರ್ ಇದರ ಉದ್ದೇಶವನ್ನು ಈಡೇರಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಹಾಗೂ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಸಮುದಾಯಕ್ಕೂ ಸಹಕಾರಿಯಾಗಲಿದೆ.
ಈ ಮಹತ್ವದ ಸಹಭಾಗಿತ್ವದೊಂದಿಗೆ MIT xPRO ಹಾಗೂ ತುಂಬೆ ಇನ್ಸ್ಟಿಟ್ಯೂಟ್ ಆಫ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ತರಬೇತಿ ಕಾರ್ಯಕ್ರಮಗಳು, ಸಂಪನ್ಮೂಲ ಹಂಚಿಕೊಳ್ಳುವಿಕೆ ಹಾಗೂ ಪರಣತಿ ವಿನಿಮಯದೊಂದಿಗೆ ಸಹಕಾರವನ್ನು ವೃದ್ಧಿಸುವ ಉದ್ದೇಶವನ್ನು ಹೊಂದಿವೆ.
ಈ ಕುರಿತು ಮಾತನಾಡಿದ ಪ್ರೊಫೆಸರ್ ಹೊಸ್ಸಂ ಹಮ್ದಿ, ಆಧುನಿಕ ತಂತ್ರಜ್ಞಾನ, ಜ್ಞಾನ ವಿನಿಮಯದ ಮೂಲಕ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತಿ ಸಾಧಿಸಲು ಮತ್ತು ಎಐ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಇನ್ನಷ್ಟು ಬಲ ನೀಡಲಿದೆ ಎಂದು ಹೇಳಿದರು.
ತುಂಬೆ ಇನ್ಸ್ಟಿಟ್ಯೂಟ್ ಆಫ್ ಎಐ ಇನ್ ಹೆಲ್ತ್ಕೇರ್ ವಿವಿಧ ಸರ್ಟಿಫಿಕೇಟ್ ಪ್ರೋಗ್ರಾಂಗಳು, ತರಬೇತಿ ಕಾರ್ಯಕ್ರಮ ಮಾತ್ರವಲ್ಲದೆ ಆರೋಗ್ಯ ಸೇವಾ ಕ್ಷೇತ್ರದ ಉದ್ಯೋಗಿಗಳ ಡಿಜಿಟಲ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲೂ ಸಹಕಾರಿಯಾಗಿದ್ದು ಇದಕ್ಕಾಗಿ ಯುನಿವರ್ಸಿಟಿ ಆಫ್ ಅಪ್ಲೈಡ್ ಸಾಯನ್ಸಸ್, ಅಪ್ಪರ್ ಆಸ್ಟ್ರಿಯಾದಂತಹ ಹಲವು ಉನ್ನತ ಕಾಲೇಜುಗಳೊಂದಿಗೆ ಪಾಲುದಾರಿಕೆ ಹೊಂದಿದೆ.