ಝಕರಿಯಾ ಜೋಕಟ್ಟೆ, ಶೇಖ್ ಕರ್ನಿರೆ ಹಾಗೂ ಸತೀಶ್ ಕುಮಾರ್ ಅವರಿಗೆ ʼವಿಶ್ವಮಾನ್ಯ ಪ್ರಶಸ್ತಿ 2024ʼ ಪ್ರದಾನ
ಶೇಖ್ ಕರ್ನಿರೆ / ಝಕರಿಯಾ ಜೋಕಟ್ಟೆ / ಸತೀಶ್ ಕುಮಾರ್
ಸೌದಿ ಅರೇಬಿಯಾ: ಅಲ್ ಮುಝೈನ್ ಗಲ್ಫ್ ಸೌದಿ ಕಾಂಟ್ರಾಕ್ಟಿಂಗ್ ಕಂಪನಿಯ ಸಿಇಒ ಝಕರಿಯಾ ಜೋಕಟ್ಟೆ, ಎಕ್ಸ್ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪನಿ ಲಿಮಿಟೆಡ್ನ ನಿರ್ದೇಶಕ ಕೆ.ಎ. ಶೇಖ್ ಕರ್ನಿರೆ ಹಾಗೂ ಉದ್ಯಮಿ ಮತ್ತು ಸಮಾಜ ಸೇವಕ ಸತೀಶ್ ಕುಮಾರ್ ಅಂಚನ್ ಬಜಾಲ್ ಅವರಿಗೆ ವಿಶ್ವಮಾನ್ಯ 2024 ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಫೆ. 8ರಂದು ಸೌದಿ ಅರೇಬಿಯಾದ ದಮಾಮ್ ನಲ್ಲಿ 17ನೇ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನದ ಯಶಸ್ಸಿಗೆ ಝಕರಿಯಾ ಜೋಕಟ್ಟೆ, ಶೇಖ್ ಕರ್ನಿರೆ ಪ್ರಮುಖ ಪಾತ್ರವಹಿಸಿದ್ದರು. ಅದೇ ಸಮ್ಮೇಳನದಲ್ಲಿ ಈ ಮೂವರು ಸಾಧಕರಿಗೆ ವಿಶ್ವ ಮಾನ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸತೀಶ್ ಅಂಚನ್ ಅವರು ಮೂಲತಃ ಕಂಕನಾಡಿಯ ಪಕ್ಕಲಡ್ಕ ಬಜಾಲ್ ಅಂಚನ್ ನಿವಾಸಕ್ಕೆ ಸೇರಿದವರಾಗಿದ್ದಾರೆ.
ಅವರು ಕಂಕನಾಡಿ ಪಕ್ಕಲಡ್ಕದ ದಿ. ಚಂದ್ರಶೇಖರ್ ಕುಂದರ್ ಕೋಡಿಯಾಲ್ಬೈಲ್ ಹಾಗೂ ದಿ. ಶಾರದಾ ಅಂಚನ್ ಪುತ್ರ. ಈ ದಂಪತಿಗಳ ಮೂವರು ಪುತ್ರರ ಪೈಕಿ ಸತೀಶ್ ಅಂಚಲ್ ಕಿರಿಯ ಪುತ್ರರಾಗಿದ್ದಾರೆ.
ಝಕರಿಯಾ ಜೋಕಟ್ಟೆ ಹಾಗೂ ಕೆ.ಎ. ಶೇಖ್ ಕರ್ನಿರೆ ಅವರು ಸೌದಿ ಅರೇಬಿಯಾದ ಜುಬೈಲ್ ನಲ್ಲಿ ದೊಡ್ಡ ಉದ್ಯಮ ಸಮೂಹ ಸಂಸ್ಥೆಯನ್ನು ಸ್ಥಾಪಿಸಿ ಅಸಂಖ್ಯಾತ ಯುವಕರಿಗೆ ಉದ್ಯೋಗಕಾಶಗಳನ್ನು ಒದಗಿಸಿದ್ದಾರೆ. ಇವರಿಬ್ಬರೂ ಉದ್ಯಮಿಗಳು ಸೌದಿ ಅರೇಬಿಯಾದ ಪ್ರಮುಖ ಎನ್ನಾರೈ ಕನ್ನಡಿಗರಾಗಿದ್ದು, ಸಾಮಾಜಿಕ, ಧಾರ್ಮಿಕ ಹಾಗೂ ಸೇವಾ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ಹಾಗೂ ಪ್ರೋತ್ಸಾಹ ನೀಡುತ್ತಾ ಬಂದಿದ್ದು ಹಲವಾರು ಸಾಮಾಜಿಕ, ಧಾರ್ಮಿಕ ಹಾಗೂ ಸೇವಾ ಸಂಸ್ಥೆಗಳ ಪೋಷಕರಾಗಿದ್ದಾರೆ.