ಹಾಸನ | ಕಾಳು ಮೆಣಸು ಕೊಯ್ಯುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತ್ಯು

ಲಕ್ಷ್ಮಣ್
ಹಾಸನ : ಕಾಳು ಮೆಣಸು ಕೊಯ್ಯುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊರ್ವ ಮೃತ ಪಟ್ಟಿರುವ ಘಟನೆ ಹಾಸನದ ಆಲೂರು ತಾಲ್ಲೂಕಿನ ಕಾಮತಿ ಕೂಡಿಗೆಯಲ್ಲಿ ಹರಿಹರಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಲಕ್ಷ್ಮಣ್ (50 ) ಎಂದು ಗುರುತಿಸಲಾಗಿದೆ.
ಕೂಲಿ ಕೆಲಸಕ್ಕೆ ಬಂದಿದ್ದ ಲಕ್ಷ್ಮಣ್ ಕೆಲಸ ಮಾಡುತ್ತಿರುವಾಗಲೇ ಈ ಅವಘಡ ಸಂಭವಿಸಿದ್ದು, ಮೃತನ ಸಾವಿಗೆ ಜಮೀನು ಮಾಲಕರು ಹಾಗೂ ಕೆಇಬಿ ಅಧಿಕಾರಿಗಳು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Next Story