ಅರಸೀಕೆರೆ: ಮೊಪೆಡ್ ಗೆ ಕಾರು ಢಿಕ್ಕಿ; ಇಬ್ಬರು ಮೃತ್ಯು

ಹಾಸನ : ಫೆ,2: ಟಿವಿಎಸ್ ಮೊಪೆಡ್‌ಗೆ ಕಾರು ಢಿಕ್ಕಿಯಾಗಿ ಮೊಪೆಡ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಅರಸೀಕೆರೆ ತಾಲ್ಲೂಕಿನ ಯಾದಪುರ ಬೈಪಾಸ್‌ನಲ್ಲಿ ನಡೆದಿದೆ.
ಮುರುಂಡಿಯ ಗಂಗಾಧರ ನಾಯಕ (50), ಪ್ರಿಯ (20) ಮೃತಪಟ್ಟವರು.
ಬೆಂಗಳೂರು ಕಡೆಯಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಟಾಟಾ ನೆಕ್ಸಾನ್ ಕಾರು, ಅರಸೀಕೆರೆಯಿಂದ ಮುರುಂಡಿ ಕಡೆಗೆ ತೆರಳುತ್ತಿದ್ದ ಮಾವ-ಸೊಸೆ ಸವಾರಿ ಮಾಡುತ್ತಿದ್ದ ಟಿವಿಎಸ್ ಮೊಪೆಡ್ ಗೆ ತಿರುವಿನಲ್ಲಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಸ್ಥಳದಲ್ಲೇ ಇಬ್ಬರೂ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರಪೊಲೀಸರು ಭೇಟಿ ನೀಡಿ ವಾಹನಗಳನ್ನು ವಶಕ್ಕೆ ಪಡೆದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
Next Story