ಬೇಲೂರು| ಗ್ರಾಮೀಣ ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ
ಬೇಲೂರು: ಕಾಡಾನೆ ಸೆರೆ ಕಾರ್ಯಾಚರಣೆ ಮೂರನೇ ದಿನವೂ ಮುಂದುವರೆದಿದ್ದು, ಬೇಲೂರು ಅರಣ್ಯಾಧಿಕಾರಿ ದಿಲೀಪ್ ಕುಮಾರ್ ನೇತೃತ್ವದಲ್ಲಿ ಗ್ರಾಮೀಣ ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಕಾಡಾನೆಗಳು ತಾಲೂಕಿನಾಂದ್ಯಂತ ಮನೆಯ ಬಳಿ ಬಂದು ಬೈಕ್, ಅಟೋ ಜಖಂ ಗೊಳಿಸಿತ್ತು. ಅಲ್ಲದೆ , ರೈತರ ಬೆಳೆ ಹಾಳು ಮಾಡಿ ಉಪಟಳ ನೀಡುತ್ತಿತ್ತು.
ಕಾಫಿ ತೋಟದಲ್ಲಿ ಎರಡು ಕಾಡಾನೆಗಳನ್ನು ಪತ್ತೆ ಹಚ್ಚಿದ್ದ ಅರಣ್ಯ ಅಧಿಕಾರಿಗಳು ಅವುಗಳನ್ನು ಬೆರ್ಪಡಿಸಲು ಹರಸಾಹಸಪಟ್ಟರು. ಸುಮಾರು ಸಮಯದ ಬಳಿಕ 18 ವರ್ಷದ ಪುಂಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡಲಾಯಿತು. ಪ್ರಜ್ಞೆ ತಪ್ಪಿದ ಬಳಿಕ ಅದನ್ನು ಇತರ ಸಾಕಾನೆಗಳ ನೆರವಿನಿಂದ ರಸ್ತೆಗೆ ಕರೆತಂದು ಲಾರಿಗೆ ಹತ್ತಿಸಿ ಕುಶಾಲನಗರ ದುಬಾರೆ ಕ್ಯಾಂಪ್ ಗೆ ಬಿಡಲಾಯಿತು.
ಕಾರ್ಯಚರಣೆಯಲ್ಲಿ ಪಿಸಿಎಪ್ ಸುಭಾಷ್ ಮಾಲ್ಕಡೆ, ಡಿ.ಸಿ.ಎಪ್ ಸೌರಬ್ ಕುಮಾರ್, ಎ.ಸಿ.ಎಪ್ ಪುಳಕಿತ್ ಮೀನ, ಮಹದೇವ್ ಸೇರಿದಂತೆ ಮತ್ತಿತರರು ಹಾಜರಿದ್ದರು.
Next Story