ಹಾಸನ: ಮರಕ್ಕೆ ಢಿಕ್ಕಿಯಾದ ಥಾರ್; ಓರ್ವ ಮೃತ್ಯು

ಹಾಸನ:ಜ, 27 : ಥಾರ್ ಜೀಪ್ ಮರಕ್ಕೆ ಢಿಕ್ಕಿಯಾಗಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲ್ಲೂಕಿನ ಶಂಕರನಹಳ್ಳಿ-ಮಲ್ಲಿಗೆವಾಳು ಗ್ರಾಮದ ಬಳಿ ಸೋಮವಾರ ನಡೆದಿದೆ.
ಅರಕಲಗೂಡು ತಾಲ್ಲೂಕಿನ ಕೊಂಗಳ್ಳಿ ಗ್ರಾಮದ ಶಿಕ್ಷಕ ಚಂದ್ರ ಎಂಬವರ ಪುತ್ರ ನಿಶ್ಚಿತ್ (28) ಸ್ಥಳದಲ್ಲೇ ಮೃತಪಟ್ಟ ಯುವಕ. ಕೀರ್ತಿ, ಹಾಗೂ ರಾಧಿಕಾ ಗಾಯಾಳುಗಳಾಗಿದ್ದು, ಅವರನ್ನು ತಕ್ಷಣ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಥಾರ್ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story