ಬಿಜೆಪಿ ಪರ ಸಂದೇಶ ರವಾನೆ; ಸರ್ಕಾರಿ ಅಧಿಕಾರಿ ಅಮಾನತು
ಹಾಸನ, ಏ.8-ಬಿಜೆಪಿ ಪರ ಸಂದೇಶ ಹೊಂದಿದ ಮೆಸೇಜ್ ಹಂಚಿಕೊಂಡ ಆರೋಪ ಹೊತ್ತಿದ್ದ ಹಾಸನದ ಡಿಡಿಪಿಐ ಕಚೇರಿಯ ಪ್ರಥಮ ದರ್ಜೆ ಸಹಾಯಕ ಬಿ.ಎಚ್.ಮಂಜುನಾಥ್ ಅವರನ್ನು ಅಮಾನತುಗೊಳಿಸಿರುವ ಬಗ್ಗೆ ವರದಿಯಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆದೇಶ ಹೊರಡಿಸಿದ್ದು, ಪ್ರೀತಂಜೆ.ಗೌಡ ಹಾಸನ ಎಂಎಲ್ಎ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಚುನಾವಣೆ ಪ್ರಚಾರದ ಸಂದೇಶ ಕಳುಹಿಸಿರುವ ಬಗ್ಗೆ ಮಂಜುನಾಥ್ ಅವರ ವಿರುದ್ಧ ನಾಗೇಂದ್ರ ರಾಮ ಎಂಬವರು ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಪರಿಶೀಲಿಸಿ 24 ಗಂಟೆಯೊಳಗೆ ಡಿಡಿಪಿಐಗೆ ಮಾಹಿತಿ ಒದಗಿಸಿ ಎಂದು ಎಡಿಸಿ ಶಾಂತಲಾ ನೋಟಿಸ್ ನೀಡಿದ್ದರು. ಅದರಂತೆ ಡಿಡಿಪಿಐ, ಮಂಜುನಾಥ್ ಅವರ ವಿವರಣೆ ಕೇಳಿದ್ದರು. ಅದರ ಪ್ರತಿಕ್ರಿಯೆ ಪಡೆದ ಡಿಡಿಪಿಐ, ಸಹಾಯಕ ಚುನಾವಣಾಧಿಕಾರಿಗೆ ವರದಿ ಸಲ್ಲಿಸಿದ್ದರು.
ಪ್ರಕರಣದ ಬಗ್ಗೆ ಮಂಜುನಾಥ್ ವಿವರಣೆ ಹಾಗೂ ಡಿಡಿಪಿಐ ವರದಿ ಆಧರಿಸಿ ಇಲಾಖಾ ತನಿಖೆ ಕಾಯ್ದಿರಿಸಿ ಬಿ.ಎಚ್.ಮಂಜುನಾಥ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Next Story