ಸಕಲೇಶಪುರ: ಕಾಡಾನೆ ದಾಳಿಗೆ ಕಾಫಿ ತೋಟದ ಮಾಲಕ ಬಲಿ

ಸಾಂದರ್ಭಿಕ ಚಿತ್ರ
ಸಕಲೇಶಪುರ: ಎ.25: ಕಾಡಾನೆ ದಾಳಿಗೊಳಗಾಗಿ ಕಾಫಿ ತೋಟದ ಮಾಲಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಬೈಕೆರೆವ ಗ್ರಾಮದಲ್ಲಿ ನಡೆದಿದೆ.
ಷಣ್ಮುಖ(45) ಮೃತಪಟ್ಟವರು. ಅಮೃತೇಶ್ವರ ಕಾಫಿ ತೋಟದ ಮಾಲಿಕರಾಗಿದ್ದ ಇವರು ತೋಟದಲ್ಲಿ ಕೆಲಸ ಮಾಡಿಸಲು ತೆರಳಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಷಣ್ಮುಖರಿಗೆ 15 ಎಕರೆ ಕಾಫಿ ಕಾಫಿ ತೋಟವಿದೆ. ಇವರ ತೋಟದಲ್ಲಿ ರಾತ್ರಿಯಿಂದಲೇ ಆನೆಗಳ ಹಿಂಡು ಬೀಡು ಬಿಟ್ಟಿದ್ದು, ಈ ಬಗ್ಗೆ ಷಣ್ಮುಖರಿಗೆ ಮಾಹಿತಿ ಇತ್ತೆನ್ನಲಾಗಿದೆ. ಹೀಗಿದ್ದರೂ ಅವರು ಏಕೆ ತೋಟಕ್ಕೆ ಹೋದರು ಎಂಬುದು ತಿಳಿದು ಬಂದಿಲ್ಲ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Next Story