ಸಕಲೇಶಪುರ: ರೀಲ್ಸ್ ಮಾಡಲು ಹೋಗಿ ಆಯತಪ್ಪಿ ಬೆಟ್ಟದಿಂದ ಬಿದ್ದ ಯುವಕ

ಸಕಲೇಶಪುರ: ತಾಲೂಕಿನ ಗವಿಬೆಟ್ಟದಲ್ಲಿ ಸೋಮವಾರ ಸಂಜೆ ನಡೆದ ದಾರುಣ ಘಟನೆಯಲ್ಲಿ ರೀಲ್ಸ್ ಮಾಡಲು ಹೋಗಿದ್ದ ಯುವಕ ಆಯತಪ್ಪಿ ಬೆಟ್ಟದಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾನೆ.
ಗಾಯಗೊಂಡ ಯುವಕನನ್ನು ರಾಶಿದ್ (18) ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ತಕ್ಷಣವೇ ಸ್ಥಳೀಯರು ಹಾಗೂ ಸ್ನೇಹಿತರು ಸಹಾಯಕ್ಕೆ ಧಾವಿಸಿ ಗಾಯಗೊಂಡ ರಾಶಿದ್ ಅನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಗವಿಬೆಟ್ಟವು ತನ್ನ ಸೌಂದರ್ಯ ಹಾಗೂ ಪ್ರವಾಸಿಗರ ಆಕರ್ಷಣೆಗೆ ಪ್ರಸಿದ್ಧವಾಗಿದೆ.
Next Story