ಹಾವೇರಿ | ಎತ್ತಿನಗಾಡಿಗೆ ಬೈಕ್ ಢಿಕ್ಕಿ; ಮೂವರು ಯುವಕರು ಮೃತ್ಯು

ಹಾವೇರಿ : ಎತ್ತಿನಗಾಡಿಗೆ ಬೈಕ್ ಢಿಕ್ಕಿಯಾಗಿ ಪರಿಣಾಮ ಬೈಕ್ನಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗುಡಗೂರು ಕ್ರಾಸ್ ಬಳಿ ನಡೆದಿದೆ.
ಮೃತ ಬೈಕ್ ಸವಾರರನ್ನು ಶಿಕುಮಾರ ಉಪ್ಪಾರ(25), ಆಕಾಶ ಬಿರಾದಾರ(23), ಮತ್ತು ದರ್ಶನ (23) ಗುರುತಿಸಲಾಗಿದೆ.
ಹನುಮನಮಟ್ಟಿ ಗ್ರಾಮದಿಂದ ಇಬ್ಬರು ವಿದ್ಯಾರ್ಥಿಗಳು ಸೇರಿ ಬೈಕ್ನಲ್ಲಿ ಮೂವರು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಜಾತ್ರೆಗೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ರಾಣೆಬೇನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story