ವಿಧಾನಸೌಧಕ್ಕೆ ಬೀಗ ಹಾಕಿ, ಹಣದ ಚೀಲ ತಂದು ಚುನಾವಣೆ ಮಾಡಿದ್ದಾರೆ: ಬಸವರಾಜ ಬೊಮ್ಮಾಯಿ ಆರೋಪ
ಹಾವೇರಿ: ರಾಜ್ಯ ಸರಕಾರ ಹದಿನೈದು ದಿನದಿಂದ ವಿಧಾನಸೌಧಕ್ಕೆ ಬೀಗ ಹಾಕಿ ಹಣದ ಚೀಲ ತೆಗೆದುಕೊಂಡು ಬಂದು ಚುನಾವಣೆ ಮಾಡಿದ್ದಾರೆ. ಅವರಿಗೆ ಜನರು ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಅವರು ಇಂದು ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಯೊಂದಿಗೆ ಶಿಗ್ಗಾವಿ ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ-1 ನಲ್ಲಿ ಮತದಾನ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಈ ಸರ್ಕಾರ ವಿಧಾನಸೌಧಕ್ಕೆ ಕೀಲಿ ಹಾಕಿ ಹಣದ ಚೀಲ ಹಿಡಿದುಕೊಂಡು ಬಂದು ಚುನಾವಣೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಸರ್ಕಾರಿ ಕೆಲಸಗಳನ್ನು ನಿಲ್ಲಿಸಿ ಚುನಾವಣೆ ನಡೆಸಿದ್ದಾರೆ. ಅವರು ತಮ್ಮ ರಾಜಕೀಯ ಅಧಃಪತನವನ್ನು ಈ ರೀತಿ ತೊರಿಸಿದ್ದಾರೆ ಎಂದರು.
ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಆರಂಭದಿಂದಲೂ ನೂರಕ್ಕು ನೂರು ಸಾಮಾನ್ಯ ಮತದಾರರು ಬಹಿರಂಗ ಬೆಂಬಲ ವ್ಯಕ್ತ ಪಡಿಸಿದ್ದಾರೆ. ದಿನೇ ದಿನೆ ಹೆಚ್ಚಳವಾಗಿದೆ ಇದೆಲ್ಲದರ ಹಿನ್ನೆಲೆಯಲ್ಲಿ ಭರತ್ ಬೊಮ್ಮಾಯಿ ಬಹಳ ಅಂತರದಿಂದ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನವರು ನಮ್ಮ ಮೇಲೆ ಮಾಡಿರುವ ಅರೋಪ ಯಾವುದು ಸತ್ಯವಲ್ಲ. ನವೆಂಬರ್ 23 ರಕ್ಕೆ ಅದಕ್ಕೆಲ್ಲ ಉತ್ತರ ಸಿಗುತ್ತದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ರೌಡಿ ಶೀಟರ್ ಪ್ರಕರಣ ಇನ್ನು ಖುಲಾಸೆಯಾಗಿಲ್ಲ ಎಂದು ಎಸ್ಪಿ ಅವರೇ ಹೇಳಿದ್ದರು. ಅವರೇ ಎರಡು ತಾಸಿನಲ್ಲಿ ಉಲ್ಟಾ ಹೊಡೆದರು. ಗೃಹ ಇಲಾಖೆ ಪೊಲೀಸರನ್ನು ಸಂಪೂರ್ಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಹೇಳಿದರು.