ಹಾವೇರಿ | ಯುವತಿಯ ಹತ್ಯೆ ಪ್ರಕರಣ: ಓರ್ವ ಆರೋಪಿಯ ಬಂಧನ
ಪ್ರಕರಣದ ಕುರಿತು ಎಸ್ಪಿ ಅಂಶುಕುಮಾರ್ ಹೇಳಿದ್ದೇನು?

ಸ್ವಾತಿ ಬ್ಯಾಡಗಿ
ಹಾವೇರಿ : ಇಲ್ಲಿನ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಯುವತಿ ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನಯಾಝ್ ಎಂದು ಎಂದು ಗುರುತಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳಾದ ದುರ್ಗಾಚಾರಿ, ವಿನಯ್ ಎಂಬವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕಳೆದ ಮಾರ್ಚ್ 6ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಸ್ವಾತಿಯ ಮೃತದೇಹ ಪತ್ತೆಯಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆ ವೇಳೆ ಸ್ವಾತಿ ಹತ್ಯೆಯಾಗಿರುವುದು ದೃಢವಾಗಿತ್ತು. ಇದಾದ ನಂತರ ಹಲಗೇರಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಇದೀಗ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸ್ವಾತಿ ಎಂಬ ಯುವತಿ ನಯಾಜ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇದೇ ವೇಳೆ ಸ್ವಾತಿಗೆ ನಯಾಜ್ ಪ್ರೀತಿ - ಪ್ರೇಮ ಬೇಡ ಎಂದು ನಿರಾಕರಿಸಿದ್ದು ಎನ್ನಲಾಗುತ್ತಿದ್ದು . ಆದರೆ ಸ್ವಾತಿ ನಯಾಜ್ ನನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಳು ಅನ್ನೊ ವಿಚಾರದ ಹಿನ್ನೆಲೆಯಲ್ಲಿ ನಯಾಜ್ ಮತ್ತು ಸ್ನೇಹಿತರು ಸೇರಿ ಸ್ವಾತಿ ಬಳಿ ರಾಜಿಗೆ ಮುಂದಾಗಿದ್ದರು ಎನ್ನಲಾಗುತ್ತಿದೆ. ಈ ವೇಳೆ ರಾಜಿ ಸಂಧಾನ ವಿಕೋಪಕ್ಕೆ ಸಾಗಿ ಕೊಲೆ ಆಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ನಯಾಜ್, ದುರ್ಗಾಚಾರಿ, ವಿನಯ್ ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಹತ್ಯೆ ಬಳಿಕ ಆರೋಪಿಗಳು ತುಂಗಭದ್ರ ನದಿಯಲ್ಲಿ ಯುವತಿಯ ಮೃತದೇಹ ಎಸೆದಿದ್ದರು ಎಂದು ತಿಳಿದು ಬಂದಿದೆ.
ಹಾವೇರಿ ಎಸ್ಪಿ ಅಂಶುಕುಮಾರ್ ಹೇಳಿದ್ದೇನು? :
ಮಾರ್ಚ್ 6ಕ್ಕೆ ಅಪರಿಚಿತ ಮಹಿಳೆಯ ಮೃತದೇಹ ದೊರಕಿತ್ತು. ಆದರೆ ಮಾರ್ಚ್ 11 ರಂದು ಅದು ಸ್ವಾತಿ ಬ್ಯಾಡಗಿ ಎಂಬ ಯುವತಿಯ ಮೃತದೇಹ ಎಂದು ಗೊತ್ತಾಯಿತು. ಪ್ರಕರಣಕ್ಕೆ ಸಂಬಂದಿಸಿದಂತೆ ನಯಾಜ್, ವಿನಾಯಕ, ದುರ್ಗಾಚಾರಿ ಎಂಬ ಆರೋಪಿಗಳನ್ನು ಪತ್ತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸ್ವಾತಿಗೆ ಈ ಮೂವರ ಪರಿಚಯ ಇತ್ತು. ಕೊಲೆಗೂ ಮುನ್ನ ರಾಣೆಬೆನ್ನೂರು ಬಳಿ ಸ್ವಾತಿ ಹತ್ತಿರ ಆರೋಪಿಗಳು ಮಾತಾಡಿದ್ದಾರೆ. ಈ ವೇಳೆ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯ ಆಗಿತ್ತು. ಬಳಿಕ ಸ್ವಾತಿ ಕೊಲೆಗೈದು ಒಂದು ಗಾಡಿಯಲ್ಲಿ ಶವ ಸಾಗಿಸಿ ತುಂಗಭದ್ರಾ ನದಿಯಲ್ಲಿ ಎಸದಿದ್ದಾರೆ. ಆರೋಪಿ ನಯಾಜ್ ಬಂಧನವಾಗಿದೆ, ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದರು.