ಹಾವೇರಿ | ಜಮೀನಿನಲ್ಲಿ ಎರಡು ನಾಡಬಾಂಬ್ ಪತ್ತೆ; ಸ್ಫೋಟದಲ್ಲಿ ಶ್ವಾನ ಸಾವು
ಹಾವೇರಿ: ಇಲ್ಲಿನ ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದಲ್ಲಿ ಎರಡು ನಾಡಬಾಂಬ್ ಪತ್ತೆಯಾಗಿದೆ. ಮಲ್ಲಿಕಾರ್ಜುನ ಗೌಡ ಎಂಬುವವರ ಜಮೀನಿನಲ್ಲಿ ದುಷ್ಕರ್ಮಿಗಳು ಒಟ್ಟು ಮೂರು ಇಟ್ಟಿದ್ದರು. ಇದರಲ್ಲಿ ಇಂದು ನಾಡಬಾಂಬ್ ಸ್ಪೋಟಗೊಂಡು ನಾಯಿಯೊಂದು ಸಾವನ್ನಪ್ಪಿದೆ.
ಪ್ರಾಣಿಗಳನ್ನು ಬೇಟೆಯಾಡಲು ಬೇಟೆಗಾರರು ನಾಡಬಾಂಬ್ ಇಟ್ಟಿರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ 2 ಜೀವಂತ ನಾಡಬಾಂಬ್ ಗಳನ್ನು ಪೊಲೀಸರು ವಶಕ್ಕೆ ಪಟಡದುಕೊಂಡಿದ್ದಾರೆ ಎಂದು ತಿಳಿಸು ಬಂದಿದೆ.
ನಾಡಬಾಂಬ್ಗಳಿಗೆ ಪ್ರಾಣಿಯ ಕೊಬ್ಬು ಸವರಿದ್ದರಿಂದ ನಾಯಿ ಕಚ್ಚಿದೆ ಎನ್ನಲಾಗುತ್ತಿದೆ. ಸ್ಫೋಟಕ ಅಧಿನಿಯಮದ ಅಡಿಯಲ್ಲಿ ವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story