ಹಾವೇರಿ: ಯುವತಿ ಹತ್ಯೆ ಪ್ರಕರಣ; ಇನ್ನಿಬ್ಬರು ಆರೋಪಿಗಳ ಬಂಧನ

ವಿನಯ್ | ದುರ್ಗಾಚಾರಿ
ಹಾವೇರಿ: ಮಾಸೂರಿನ ಯುವತಿ ಸ್ವಾತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿನಯ್ ಹಾಗೂ ದುರ್ಗಾಚಾರಿ ಬಂಧಿತ ಆರೋಪಿಗಳು. ಶುಕ್ರವಾರ ರಾತ್ರಿ ಪ್ರಮುಖ ಆರೋಪಿ ನಯಾಜ್ ನನ್ನು ಬಂಧಿಸಿದ್ದ ಪೊಲೀಸರು, ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ವಿನಯ್ ಹಾಗೂ ದುರ್ಗಾಚಾರಿ ಪತ್ತೆಗೆ ಬಲೆ ಬೀಸಿದ್ದರು.
ಮಾರ್ಚ್ 6ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಸ್ವಾತಿಯ ಮೃತದೇಹ ಪತ್ತೆಯಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆ ವೇಳೆ ಸ್ವಾತಿ ಹತ್ಯೆಯಾಗಿರುವುದು ದೃಢವಾಗಿತ್ತು. ಇದಾದ ನಂತರ ಹಲಗೇರಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಇದೀಗ ಪ್ರಕರಣ ಸಂಬಂಧ ಮೂವರು ಆರೋಪಿಗಳ ಬಂಧನವಾಗಿದೆ.
Next Story