ಕೆಂಗಣ್ಣಿನಿಂದ ದೂರ ಇರಿ: ನೇತ್ರ ಆರೋಗ್ಯಕ್ಕೆ ಏಳು ಸರಳ ಸೂತ್ರಗಳು
ಸಾಂದರ್ಭಿಕ ಚಿತ್ರ
ಈ ಕೆಳಗಿನ ಪೌಷ್ಟಿಕ ಆಹಾರ ತೆಗೆದುಕೊಳ್ಳುವ ಮತ್ತು ಕಣ್ಣಿನ ವ್ಯಾಯಾಮದ ಮೂಲಕ ವ್ಯಾಪಕವಾಗಿ ಹರಡುತ್ತಿರುವ ಕಣ್ಣಿನ ಫ್ಲೂ ಅಥವಾ ಕೆಂಗಣ್ಣು ತೊಂದರೆಗಳಿಂದ ರಕ್ಷಿಸಿಕೊಳ್ಳಬಹುದು. ಕೆಲ ನಿರ್ದಿಷ್ಟ ವ್ಯಾಯಾಮಗಳು ಈ ಸೋಂಕನ್ನು ನಿಯಂತ್ರಿಸಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ಕಣ್ಣುಗಳನ್ನು ಸಜ್ಜುಗೊಳಿಸುತ್ತವೆ.
ಬಿರುಸಿನ ನಡಿಗೆಯಿಂದ ರಕ್ತದ ಪರಿಚಲನೆ ಕಣ್ಣು ಸೇರಿದಂತೆ ದೇಹದಾದ್ಯಂತ ಹೆಚ್ಚಲು ನೆರವಾಗುತ್ತದೆ.
30 ನಿಮಿಷಗಳ ಕಾಲ ಪ್ರತಿದಿನ ವಾಕಿಂಗ್ ಮಾಡುವುದು ಕಣ್ಣಿನ ಆರೋಗ್ಯಕ್ಕೆ ಉತ್ತಮ.
ಸೈಕ್ಲಿಂಗ್ ಹಾಗೂ ಏರೊಬಿಕ್ಸ್ ಕೂಡಾ ನಿಮ್ಮ ಕಣ್ಣಿನ ಆರೋಗ್ಯವನ್ನು ರಕ್ಷಿಸಲು ಮತ್ತು ಕೆಂಗಣ್ಣು ಸೋಂಕಿನಿಂದ ತಡೆಯಲು ಸಹಕಾರಿ.
ಕಣ್ಣು ಹೊರಳಿಸುವುದು ಮತ್ತು ಕಣ್ಣನ್ನು ಪದೇ ಪದೇ ಮುಚ್ಚಿ ತೆರೆಯುವುದು ಕೂಡಾ ಕಣ್ಣಿನ ದಣಿವನ್ನು ಕಡಿಮೆ ಮಾಡುತ್ತದೆ ಹಾಗೂ ಕಣ್ಣುಗಳ ಜಾರುವಿಕೆಯನ್ನು ಸುಲಲಿತಗೊಳಿಸುತ್ತದೆ.
ಕಣ್ಣುಗಳನ್ನು ಸುಮಾರು ಐದು ನಿಮಿಷಗಳ ಕಾಲ ಹೊರಳಿಸುವುದು ಒಳ್ಳೆಯ ಅಭ್ಯಾಸ.
ಅಂತೆಯೇ ನಿಮ್ಮ ದೃಷ್ಟಿಯನ್ನು ಕೆಲ ಸೆಕೆಂಡುಗಳ ಕಾಲ ಒಂದು ವಸ್ತುವಿನ ಮೇಲೆ ಕೇಂದ್ರೀಕರಿಸುವುದು ಹಾಗೂ ಬಳಿಕ ಬೇರೆ ವಸ್ತುವಿನ ಮೇಲೆ ಕೇಂದ್ರೀಕರಿಸುವುದು ಕೂಡಾ ನಿಮ್ಮ ಕಣ್ಣುಗಳ ಸ್ಥಿತಿಸ್ಥಾಪಕತ್ವ ಹೆಚ್ಚಿಸಲು ಹಾಗೂ ದಣಿವು ಕಡಿಮೆ ಮಾಡಲು ನೆರವಾಗುತ್ತದೆ. ಜತೆಗೆ ನಿಮ್ಮ ಅಂಗೈಗಳನ್ನು ಬೆಚ್ಚಗಾಗುವ ತನಕ ಉಜ್ಜಿ ಬಳಿಕ ಮುಚ್ಚಿದ ಕಣ್ಣುಗಳ ಮೇಲಿಡುವುದರಿಂದ ಕಣ್ಣಿನ ಮಾಂಸಖಂಡಗಳು ಸಡಿಲಗೊಳ್ಳುತ್ತವೆ.
ಉತ್ತಮ ನೈರ್ಮಲ್ಯ ಅಭ್ಯಾಸಗಳು, ನಿಯತ ವ್ಯಾಯಾಮ ಕೂಡಾ ಇದಕ್ಕೆ ಪೂರಕ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಕೃಪೆ: hindustantimes.com