ಈ ನಾಲ್ಕು ತರಕಾರಿಗಳನ್ನು ಹಸಿಯಾಗಿ ಸೇವಿಸಬೇಡಿ...
ಸಾಂದರ್ಭಿಕ ಚಿತ್ರ (Credit: thequint.com)
ತರಕಾರಿಗಳನ್ನು ಬೇಯಿಸುವುದರಿಂದ ಅವುಗಳ ಪೌಷ್ಟಿಕಾಂಶಗಳು ನಾಶವಾಗುತ್ತವೆ; ಹಣ್ಣು- ತರಕಾರಿಗಳನ್ನು ಸಂಸ್ಕರಿಸದೇ ಅಥವಾ ಬೇಯಿಸದೇ ಸೇವಿಸುವುದರಿಂದ ಹೆಚ್ಚಿನ ಶಕ್ತಿ ಬರುತ್ತದೆ. ತ್ವಚೆ ಉತ್ತಮವಾಗುತ್ತದೆ; ಜೀರ್ಣತೆ ಸುಧಾರಿಸುತ್ತದೆ ಹಾಗೂ ಹೃದ್ರೋಹ ಮತ್ತು ಕ್ಯಾನ್ಸರ್ ಸಾಧ್ಯತೆ ಕಡಿಮೆಯಾಗುತ್ತದೆ ಎನ್ನುವುದು ಹಸಿ ತರಕಾರಿಯ ಪ್ರಯೋಜಗಳನ್ನು ಪ್ರತಿಪಾದಿಸುವವರ ವಾದ. ತೀರಾ ಬೇಯಿಸುವುದರಿಂದ ತರಕಾರಿಗಳ ಪೌಷ್ಟಿಕಾಂಶ ನಾಶವಾಗುತ್ತದೆ ಎಂದು ಹೇಳಲಾಗಿದೆ. ಆದಾಗ್ಯೂ ಎಲ್ಲ ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು. ಕೆಲ ತರಕಾರಿಗಳನ್ನು ಬೇಯಿಸಿದಾಗ ಪೌಷ್ಟಿಕಾಂಶಗಳ ಹೀರುವಿಕೆ ಸುಧಾರಿಸುತ್ತದೆ. ಈ ತರಕಾರಿಗಳನ್ನು ಹಸಿಯಾಗಿ ಸೇವಿಸುವುದರಿಂದ ಪರಾವಲಂಬಿ ಕೀಟಗಳು, ಬ್ಯಾಕ್ಟೀರಿಯಾ, ವಿಷಕಾರಕ ಅಂಶಗಳು ಮತ್ತು ಆರೋಗ್ಯಕ್ಕೆ ಮಾರಕವಾಗುವ ಅಂಶಗಳು ನಮ್ಮ ದೇಹ ಸೇರಬಹುದು ಎಂದು ಎಚ್ಚರಿಸುತ್ತಾರೆ ಆಯುರ್ವೇದ ಮತ್ತು ಕರುಳು ಆರೋಗ್ಯ ತರಬೇತುದಾರರಾದ ಡಾ.ಡಿಂಪಲ್ ಜಂಗ್ಡಾ. ಏಕೆಂದರೆ ಈ ಹಸಿ ಹಣ್ಣು- ತರಕಾರಿಗಳಲ್ಲಿ ಲಾಡಿಹುಳು ಹಾಗೂ ಲಾಡಿಹುಳುವಿನ ಮೊಟ್ಟೆಗಳು ಇ.ಕೋಲಿಯಂಥ ಬ್ಯಾಕ್ಟೀರಿಯಾ ಹಾಗೂ ಪರಾವಲಂಬಿ ಕೀಟಗಳು ಇರುತ್ತವೆ ಎಂದು ಅವರು ಎಚ್ಚರಿಸುತ್ತಾರೆ.
ಈ ಕೀಟ ಅಥವಾ ಬ್ಯಾಕ್ಟೀರಿಯಾಗಳು ನಮ್ಮ ಕರುಳನ್ನು ಅಥವಾ ರಕ್ತನಾಳವನ್ನು ಇಲ್ಲವೇ ಮೆದುಳನ್ನು ಪ್ರವೇಶಿಸಿದರೆ ಸಿಸ್ಟಿಸೆರಾಸಿಸ್, ಪಾಶ್ರ್ವವಾಯು, ತಲೆನೋವು, ಲಿವರ್ಗೆ ಹಾನಿ ಮತ್ತು ನಿಮ್ಮ ಮಾಂಸಖಂಡಗಳ ಬೊಕ್ಕೆಗಳಿಗೂ ಕಾರಣವಾಬಹುದು ಎಂದು ಹೇಳುತ್ತಾರೆ. ಇಂಥ ಪ್ರಮುಖ ನಾಲ್ಕು ತರಕಾರಿಗಳೆಂದರೆ:
1. ಕೊಲಾಸಿಯಾ (ಕೆಸುವಿನ ಎಲೆ) ಎಲೆಗಳನ್ನು ಬಿಸಿ ನೀರಿನಲ್ಲಿ ಮುಳುಗಿಸಿ ಬಳಿಕ ಬಳಸುವುದು ಉತ್ತಮ. ಇದೇ ನಿಯಮ ಪಾಲಕ್ ಮತ್ತು ಬಸಳೆ ಸೊಪ್ಪಿಗೂ ಅನ್ವಯಿಸುತ್ತದೆ.
2. ಕ್ಯಾಬೇಜ್: ಲಾಡಿಹುಳು ಮತ್ತು ಲಾಡಿಹುಳು ಮೊಟ್ಟೆಗಳನ್ನು ಸಾಗಿಸುವುದಕ್ಕೆ ಕ್ಯಾಬೇಜ್ ಕುಖ್ಯಾತ. ಇವು ಬರಿಗಣ್ಣಿಗೆ ಕಾಣಿಸದು. ಇವು ಕೆಲ ಕೀಟನಾಶಕ ಹಾಗೂ ಕ್ರಿಮಿನಾಶಕದಲ್ಲೂ ಅಡಗಿರುತ್ತವೆ. ಆದ್ದರಿಂದ ತರಕಾರಿಗಳನ್ನು ತೊಳೆದರೆ ಇವು ಹೋಗುವುದಿಲ್ಲ. ಬಿಸಿ ನೀರಿನಲ್ಲಿ ಕ್ಯಾಬೇಜ್ ಮುಳುಗಿಸಿ ಹಾಗೂ ಸೇವಿಸುವ ಮುನ್ನ ಚೆನ್ನಾಗಿ ಬೇಯಿಸಿ.
3. ಕ್ಯಾಪ್ಸಿಕಾಂ: ದೊಣ್ಣೆಮೆಣಸಿನ ಕಿರೀಟ ಭಾಗವನ್ನು ತೆಗೆದು ಬೀಜವನ್ನು ಕಿತ್ತು ಅದನ್ನು ಬಿಸಿನೀರಿನಲ್ಲಿ ಮುಳುಗಿಸಿ. ಏಕೆಂದರೆ ಇದರ ಬೀಜದಲ್ಲಿ ಲಾಡಿಹುಳುವಿನ ಮೊಟ್ಟೆಗಳು ಇರಬಹುದು.
4. ಬದನೆಕಾಯಿ: ಇದರ ಬೀಜಗಳು ಕೂಡಾ ಲಾಡಿಹುಳುವಿನ ಮೊಟ್ಟೆಗಳ ಆವಾಸಸ್ಥಾನ. ಇವುಗಳನ್ನು ಕೊಲ್ಲಬೇಕಾದರೆ ತೀರಾ ಬೇಯಿಸುವುದು ಅಗತ್ಯ. ಇದರಲ್ಲಿ ಕ್ರಿಮಿಕೀಟಗಳು ಸೇರಿರುತ್ತವೆ ಎಂಬ ಕಾರಣಕ್ಕಾಗಿಯೇ ಬಹಳಷ್ಟು ಮಂದಿ ಇದನ್ನು ಮನೆಗಳಿಗೆ ತರುವುದೇ ಇಲ್ಲ.
ಕೃಪೆ: hindustantimes.com