‘ವರ್ಕ್ ಫ್ರಮ್ ಹೋಮ್’ ದುಷ್ಪರಿಣಾಮ ಏನು ಗೊತ್ತೇ?: ತಜ್ಞರ ಅಭಿಪ್ರಾಯ ಹೀಗಿದೆ..
ಸಾಂದರ್ಭಿಕ ಚಿತ್ರ (Credit: financialexpress.com)
ಕೋವಿಡ್ ಬಳಿಕ ಜಗತ್ತಿನಲ್ಲಿ ಹಲವು ಉದ್ಯೋಗ ಕಚೇರಿಗಳು ಮನೆಗೆ ಬದಲಾಗಿವೆ. ಹೈಬ್ರೀಡ್ ವಿಧಾನದ ಈ ಹೊಸ ವ್ಯವಸ್ಥೆ ಹೆಚ್ಚಿನ ವಿಶ್ರಾಂತಿ ನೀಡುವ ಮೂಲಕ, ಕೆಲಸ ಮತ್ತು ಜೀವನದ ಸಮತೋಲನ ಸಾಧಿಸುವ ಮೂಲಕ ಹಾಗೂ ಸಂಚಾರದ ಹಣ ಉಳಿಸುವ ಮೂಲಕ ಉದ್ಯೋಗಿಗಳ ಬದುಕನ್ನು ಸುಲಭಗೊಳಿಸಿದೆ. ಆದರೆ ಸಮಗ್ರ ಆರೋಗ್ಯದ ಮೇಲೆ ಇದರ ಅಡ್ಡ ಪರಿಣಾಮಗಳನ್ನೂ ತಳ್ಳಿಹಾಕುವಂತಿಲ್ಲ.
ಹಲವು ಮಂದಿ ಒಂದೇ ಭಂಗಿಯಲ್ಲಿ ಹಲವು ಗಂಟೆಗಳ ಕಾಲ ಕುಳಿತು ಮನೆಯಿಂದಲೇ ಕಚೇರಿ ಕಾರ್ಯವನ್ನು ನಿರ್ವಹಿಸುತ್ತಾರೆ. ಸಾಮಾನ್ಯವಾಗಿ ನಡೆದಾಡಲು ಅವಕಾಶವೇ ಇಲ್ಲ. ಇದರಿಂದಾಗಿ ಹಲವು ಮಂದಿಗೆ ಮೂಳೆ, ಮಾಂಸಖಂಡ ಮತ್ತು ಕೀಲು ಸಮಸ್ಯೆಗಳು ಹೆಚ್ಚುತ್ತವೆ ಎಂದು ತಜ್ಞರು ಹೇಳುತ್ತಾರೆ. ಸಾಕಷ್ಟು ಚಲನೆ ಇಲ್ಲದಿದ್ದರೆ ಮಾಂಸಖಂಡಗಳು ಮತ್ತು ಕೀಲುಗಳ ಸಮಸ್ಯೆ ಧೀರ್ಘಾವಧಿಯಲ್ಲಿ ಗಂಭೀರವಾಗುತ್ತದೆ ಎನ್ನುವುದು ಅವರ ಅಭಿಮತ.
ಮನೆಯಿಂದ ಸಾಕಷ್ಟು ಹೊರಗೆ ಹೋಗದೇ ಇರುವುದು ವಿಟಮಿನ್ ಡಿ ಕೊರತೆಗೆ ಕಾರಣವಾಗಬಹುದು ಹಾಗೂ ಕ್ಯಾಲ್ಷಿಯಂ ಹೀರಿಕೊಳ್ಳುವ ಸಾಮಥ್ರ್ಯದ ಮೇಲೆ ಪರಿಣಾಮ ಬೀರಿ ಮೂಳೆ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡಬಹುದು. ಬದಲಾವಣೆ ಇಲ್ಲದ ಕಾರಣದಿಂದಾಗಿ ಇಂಥ ಉದ್ಯೋಗಿಗಳು ಉತ್ಸಾಹ ಕಳೆದುಕೊಳ್ಳಬಹುದು ಹಾಗೂ ಅವರ ಸಾಮಥ್ರ್ಯದ ಮೇಲೂ ಇದು ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸುತ್ತಾರೆ.
ಕೋವಿಡ್ ಸಂದರ್ಭದಲ್ಲಿ ಜಾರಿಗೆ ಬಂದ ಈ ವ್ಯವಸ್ಥೆ ಇಂದಿಗೂ ಜಾರಿಯಲ್ಲಿದೆ. ಕುಳಿತುಕೊಳ್ಳುವುದು ಎನ್ನುವುದು ಹೊಸ ಬಗೆಯ ಧೂಮಪಾನ ಎಂದು ಸರಿಯಾಗಿಯೇ ವಿಶ್ಲೇಷಿಸಲಾಗುತ್ತಿದೆ. ಸಿಗರೇಟ್ ನಮ್ಮ ದೇಹದ ಮೇಲೆ ಬೀರುವ ಅಡ್ಡ ಪರಿಣಾಮವನ್ನು ಸುಧೀರ್ಘ ಅವಧಿಗೆ ಕುಳಿತುಕೊಳ್ಳುವ ಕ್ರಮ ಕೂಡಾ ಉಂಟುಮಾಡುತ್ತದೆ. ತೂಕ ಹೆಚ್ಚಳಕ್ಕೆ, ಬೆನ್ನುಮೂಳೆಗೆ ಹಾನಿ ಮಾಡಲು ಮತ್ತು ಸ್ನಾಯುಗಳ ಆರೋಗ್ಯ ವ್ಯತ್ಯಯಕ್ಕೂ ಇದು ಕಾರಣವಾಗಬಹುದು ಎಂದು ಫೋರ್ಟಿಸ್ ಆಸ್ಪತ್ರೆಯ ತಜ್ಞವೈದ್ಯ ಡಾ.ಪುನೀತ್ ಮಿಶ್ರಾ ಹೇಳುತ್ತಾರೆ.
ಕೃಪೆ: hindustantimes.com