ಸೀನು ಬಂದರೆ ಹತ್ತಿಕ್ಕಿಕೊಳ್ಳಬಾರದು ಏಕೆ ಗೊತ್ತೇ?
Photo: freepik.com
"ನೀವು ಸೀನನ್ನು ಹತ್ತಿಕ್ಕಿಕೊಳ್ಳುವುದರಿಂದ ನಿಮ್ಮ ಮೂಗಿನಿಂದ ಕಿರಿಕಿರಿಯಾಗುವ ಅಂಶವನ್ನು ಕಿತ್ತುಹಾಕುವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಹಾಗೂ ಇದು ಶ್ವಾಸನಾಳದ ಒಳಗೆ ಒತ್ತಡವನ್ನು ಉಂಟುಮಾಡುತ್ತದೆ" ಎನ್ನುತ್ತಾರೆ ಎಚ್ಸಿಜಿ ಆಸ್ಪತ್ರೆಯ ಇಎಂಟಿ ಸರ್ಜನ್ ಡಾ.ಪಾರ್ಥ ಹಿಂಗೋಲ್.
ಸೀನುವಿಕೆ ದೇಹದ ಉಸಿರಾಟ ವ್ಯವಸ್ಥೆಯ ಸಹಜ ಪ್ರತಿಕ್ರಿಯೆ. ಇದು ಶ್ವಾಸ ನಾಳವನ್ನು ಸ್ವಚ್ಛಗೊಳಿಸುತ್ತದೆ ಹಾಗೂ ಕಿರಿಕಿರಿಕಾರಕ ಅಂಶವನ್ನು, ಕಣಗಳನ್ನು ಅಥವಾ ಸಂಭಾವ್ಯ ವೈರಸ್ಗಳನ್ನು ನಿರ್ಮೂಲನೆ ಮಾಡುತ್ತದೆ ಹಾಗೂ ನಿಮ್ಮ ಶ್ವಾಸಕೋಶ ವ್ಯವಸ್ಥೆಯ ಕಾರ್ಯವನ್ನು ಸುಲಲಿತವಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. 2018 ಹಾಗೂ ಇತ್ತೀಚೆಗೆ ವರದಿಯಾದ ಪ್ರಕರಣಗಳಲ್ಲಿ ಸೀನುವುದನ್ನು ಹತ್ತಿಕ್ಕಿಕೊಳ್ಳುವ ಪ್ರಯತ್ನದಲ್ಲಿ ಬ್ರಿಟಿಷ್ ವ್ಯಕ್ತಿಯ ಗಂಟಲಿಗೆ ಗಾಯಗಳಾಗಿವೆ.
ಬಿಎಂಜೆ ಕೇಸ್ ರಿಪೋಟ್ರ್ಸ್ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, 34 ವರ್ಷದ ವ್ಯಕ್ತಿಯೊಬ್ಬ ಸೀನು ಹತ್ತಿಕ್ಕುವ ಪ್ರಯತ್ನದಲ್ಲಿ, ತನ್ನ ಬಾಯಿಯನ್ನು ಮುಚ್ಚಿ ಮೂಗಿನ ಎರಡೂ ರಂಧ್ರಗಳನ್ನು ಮುಚ್ಚಿದ. ಆಗ ಸೀನಿನ ಒತ್ತಡ ಆತನ ಕತ್ತನ್ನು ಸೀಳಿದೆ. ಈ ಗಾಯದಿಂದಾಗಿ ನೋವುಕಾರಕ ಬಾವು ಕಾಣಿಸಿಕೊಂಡಿದ್ದು, ಆತನ ಧ್ವನಿಯಲ್ಲೂ ಬದಲಾವಣೆಯಾಗಿದೆ.
ಸೀನುವಿಕೆ ಹತ್ತಿಕ್ಕುವುದರಿಂದ ನಿಮ್ಮ ಮೂಗಿನಿಂದ ಕಿರಿಕಿರಿಕಾರಕ ಅಂಶವನ್ನು ಸ್ವಚ್ಛಪಡಿಸುವ ಪ್ರಕ್ರಿಯೆಗೆ ತಡೆ ಉಂಟಾಗುತ್ತದೆ ಹಾಗೂ ಶ್ವಾಸನಾಳದ ಒಳಗೆ ಇದು ಒತ್ತಡ ನಿರ್ಮಿಸುತ್ತದೆ. ಸೀನಿನ ಬಲ ಕಡಿಮೆಯಾದಾ, ಒತ್ತಡ, ತಪ್ಪಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುತ್ತದೆ. ಸಾಮಾನ್ಯವಾಗಿ ದೇಹದ ದುರ್ಬಲ ಭಾಗವನ್ನು ಆರಿಸಿಕೊಳ್ಳುತ್ತದೆ ಎಂದು ಅವರು ಸ್ಪಷ್ಟಪಡಿಸುತ್ತಾರೆ.
ಹೀಗೆ ದಿಢೀರನೇ ಒತ್ತಡ ಬಿಡುಗಡೆಯಾಗುವುದು ಕಿವಿಯ ತಮಟೆ ಹರಿಯಲು ಕಾರಣವಾಗುತ್ತದೆ. ಒಳಮುಖ ಒತ್ತಡ ಹೆಚ್ಚಲು ಅಥವಾ ರಕ್ತನಾಳ ಒಡೆಯಲು ಕೂಡಾ ಇದು ಕಾರಣವಾಗಬಹುದು. ಇದರ ಪರಿಣಾಮವಾಗಿ ಅಸಾಧ್ಯ ನೋವು, ಬಾವು ಸಮಸ್ಯೆ, ಧ್ವನಿಯ ಗುಣಮಟ್ಟದಲ್ಲಿ ಬದಲಾವಣೆಯೂ ಸಾಧ್ಯತೆ ಇದೆ ಎಂದು ಹಿಂಗೋಲ್ ಅಭಿಪ್ರಾಯಪಡುತ್ತಾರೆ.
ಕೃಪೆ: indianexpress.com