ಕೂದಲು ಆರೈಕೆಯಿಂದ.. ತ್ವಚೆಯ ಕಾಂತಿಯವರೆಗೆ; ಬಾಳೆಹಣ್ಣು ಸೇವನೆಯ ಹತ್ತು ಪ್ರಯೋಜನಗಳು
ಸಾಂದರ್ಭಿಕ ಚಿತ್ರ
ಬಾಳೆಹಣ್ಣನ್ನು ಸಾಮಾನ್ಯವಾಗಿ ದೈನಂದಿನ ಆಹಾರಕ್ರಮದ ಆರೋಗ್ಯಕರ ಅಂಶ ಎಂದು ಪರಿಗಣಿಸಲಾಗುತ್ತದೆ. ಅಗತ್ಯ ಪೌಷ್ಟಿಕಾಂಶಗಳಾದ ಪೊಟ್ಯಾಶಿಯಂ, ವಿಟಮಿನ್ ಸಿ, ವಿಟಮಿನ್ ಬಿ6 ಹಾಗೂ ನಾರಿನ ಅಂಶವನ್ನು ಹೆಚ್ಚಾಗಿ ಇದು ಹೊಂದಿರುತ್ತದೆ. ಇದು ಆ್ಯಂಟಿಆಕ್ಸಿಡೆಂಡ್ಗಳನ್ನು ಹೊಂದಿರುವುದು ಮಾತ್ರವಲ್ಲದೆ ಕನಿಷ್ಠ ಕ್ಯಾಲೋರಿ ಹಾಗೂ ಕೊಬ್ಬಿನ ಅಂಶವನ್ನು ಹೊಂದಿರುತ್ತದೆ. ಬಾಳೆಹಣ್ಣಿನ ಸೇವನೆ ನಿಮ್ಮ ಆರೋಗ್ಯ, ಜೀರ್ಣಕ್ರಿಯೆಗೆ ಪೂರಕವಾಗಿದ್ದು, ಹೆಚ್ಚಿನ ಶಕ್ತಿ ನೀಡುತ್ತದೆ.
ಬಾಳೆಹಣ್ಣಿನಲ್ಲಿರುವ ವಿಟಮಿನ್ ಸಿ, ವಿಟಮಿನ್ ಬಿ6 ಹಾಗೂ ಪೊಟ್ಯಾಶಿಯಂನಂಥ ವಿಟಮಿನ್ ಹಾಗೂ ಖನಿಜಾಂಶಗಳು ನಮ್ಮ ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಅತ್ಯಂತ ಮುಖ್ಯ. ನಮ್ಮ ಚರ್ಮದ ಸ್ಥಿತಿಸ್ಥಾಪಕತ್ವನ್ನು ಹೆಚ್ಚಿಸಿ, ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ಅಗತ್ಯವಾದ ಕೊಲಾಜಿನ್ ಉತ್ಪಾದನೆಗೂ ವಿಟಮಿನ್ ಸಿ ಅಗತ್ಯ. ಅಂತೆಯೇ ಕೂದಲು ಹಾಗೂ ತ್ವಚೆಯ ಬಣ್ಣಕ್ಕೆ ಕಾರಣವಾಗುವ ಮೆಲಮಿನ್ ಉತ್ಪಾದನೆಗೆ ಕಾರಣವಾಗುವ ವಿಟಮಿನ್ ಬಿ6 ಕೂಡಾ ಬಾಳೆಹಣ್ಣಿನಲ್ಲಿ ಹೇರಳವಾಗಿರುತ್ತದೆ.
ಬಾಳೆಹಣ್ಣಿನ ಸೇವನೆಯ ಇತರ ಎಂಟು ಪ್ರಯೋಜನಗಳು ಇಲ್ಲಿವೆ:
► ಬಾಳೆಹಣ್ಣು ಅಗತ್ಯ ಪೋಷಕಾಂಶಗಳ ಉತ್ತಮ ಮೂಲ
► ಇದು ಹೃದಯ ಆರೋಗ್ಯಕ್ಕೆ ಸಹಕಾರಿ
► ನಮ್ಮ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ
► ಒತ್ತಡವನ್ನು ಕಡಿಮೆ ಮಾಡಿ ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ
► ದೇಹತೂಕ ನಿರ್ವಹಿಸಲು ಸಹಕಾರಿ
► ಶಕ್ತಿಯನ್ನು ನೀಡಿ ದಣಿವಿನ ವಿರುದ್ಧ ಹೋರಾಡುತ್ತದೆ
► ಎಲುಬು ಗಟ್ಟಿಗೊಳಿಸುತ್ತದೆ
► ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಿಸುತ್ತದೆ
ಕೃಪೆ: ndtv.com