ಹೃದಯ ಸಮಸ್ಯೆ ದೂರ ಇಡಲು ಇಲ್ಲಿದೆ ಉಪಯುಕ್ತ ಸಲಹೆಗಳು..
ಹೃದಯ ಆರೋಗ್ಯದ ಸಮಸ್ಯೆಗಳನ್ನು ಹೆಚ್ಚಿಸಬಲ್ಲ ಅಪಾಯಕಾರಿ ಅಂಶಗಳ ಬಗ್ಗೆ ಎಚ್ಚರ ವಹಿಸುವಂತೆ ಆರೋಗ್ಯ ತಜ್ಞರು ಎಚ್ಚರಿಸಿದ್ದು, ಹೃದಯ ಸಮಸ್ಯೆಗಳ ತಡೆಗೆ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಹೃದ್ರೋಗ ವಿಶ್ವಾದ್ಯಂತ ಸಾವಿನ ಪ್ರಮುಖ ಕಾರಣವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಮಂದಿಯನ್ನು ಬಲಿಪಡೆಯುತ್ತಿದೆ. ಹೃದಯ ಮತ್ತು ರಕ್ತನಾಳಗಳಿಗೆ ಹಾನಿ ಮಾಡುವ ವಿವಿಧ ಸಮಸ್ಯೆಗಳು, ಹೃದಯಾಘಾತ, ಪಾಶ್ರ್ವವಾಯು, ಪರಿಧಮನಿ ಅಪದಮನಿ ರೋಗಗಳು ಇದರಲ್ಲಿ ಸೇರುತ್ತವೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಅಪಾಯಕಾರಿ ಅಂಶಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಅದರ ಪರಿಣಾಮ ನಮ್ಮ ದೇಹದ ಮೇಲಾಗದಂತೆ ತಡೆಯುವುದು ಅಗತ್ಯ.
ಸರ್ ಎನ್‍ಎಚ್ ರಿಲಯನ್ಸ್ ಫೌಂಡೇಷನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹೃದ್ರೋಗ ತಜ್ಞ ಡಾ. ಬಿಪೀನ್‍ಚಂದ್ರ ಅವರ ಪ್ರಕಾರ, "ಹೃದ್ರೋಗಕ್ಕೆ ಪ್ರಮುಖ ಅಪಾಯಕಾರಿ ಅಂಶವೆಂದರೆ ಧೂಮಪಾನ. ತಂಬಾಕಿನ ಹೊಗೆಯಲ್ಲಿ ಕಂಡುಬರುವ ರಾಸಾಯನಿಕ ನಮ್ಮ ರಕ್ತನಾಳಗಳನ್ನು ಹಾನಿ ಮಾಡುತ್ತದೆ ಹಾಗೂ ಹೃದಯ ಸ್ನಾಯುಗಳಿಗೆ ಲಭ್ಯವಾಗುವ ಆಮ್ಲಜನಕ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಹೃದಯಾಘಾತ ಮತ್ತು ಪಾಶ್ರ್ವವಾಯುವಿಗೆ ಕಾರಣವಾಗಬಲ್ಲದು. ಇನ್ನೊಂದು ಅಪಾಯಕಾರಿ ಅಂಶವೆಂಧರೆ ಅಧಿಕ ರಕ್ತದ ಒತ್ತಡ ಮತ್ತು ಹೈಪರ್ ಟೆನ್ಷನ್"
ಬೊಜ್ಜು ಹಾಗೂ ದೈಹಿಕ ನಿಷ್ಕ್ರಿಯತೆ ಕೂಡಾ ಹೃದಯ ರೋಗಕ್ಕೆ ಆಹ್ವಾನ ನೀಡುತ್ತದೆ. ಅಧಿಕ ಭಾರ ಹೃದಯಕ್ಕೆ ಹೆಚ್ಚಿನ ಒತ್ತಡ ನೀಡುತ್ತದೆ ಹಗೂ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಕಾರಣವಾಗುತ್ತದೆ. ದೈಹಿಕ ಚಟುವಟಿಕೆಗಳ ಕೊರತೆ ಹೃದಯ ಸ್ನಾಯುವನ್ನು ದುರ್ಬಲಗೊಳಿಸುತ್ತದೆ. ಅನಾರೋಗ್ಯಕರ ಆಹಾರ ಪದ್ಧತಿಯಿಂದ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಪ್ರಮಾಣ ಹೆಚ್ಚುವುದು ಕೂಡಾ ಹೃದಯ ಆರೋಗ್ಯಕ್ಕೆ ಮಾರಕ.
ಹೃದಯ ಸಮಸ್ಯೆಗಳಿಂದ ದೂರ ಇರಬೇಕಾದರೆ ಸಮತೋಲಿತ ಆಹಾರ ಸೇವನೆ ಪರಮುಖ. ಹಣ್ಣು, ತರಕಾರಿ, ಇಡಿಯ ಕಾಳು, ಕ್ಷೀಣ ಪ್ರೊಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಅಂಶವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಇದು ಅಗತ್ಯ ಪೌಷ್ಟಿಕಾಂಶವನ್ನು ಕೊಡುವುದು ಮಾತ್ರವಲ್ಲದೇ, ಹೃದಯ ಸಮಸ್ಯೆ ಕಡಿಮೆ ಮಾಡಲೂ ಇದು ಕಾರಣವಾಗುತ್ತದೆ ಎನ್ನುವುದು ಅವರ ಸಲಹೆ.
ಹೃದಯ ತಡೆಗೆ ಮತ್ತೊಂದು ಪ್ರಮುಖ ಅಂಶವೆಂದರೆ ನಿಯತ ವ್ಯಾಯಾಮ, ವಾಕಿಂಗ್, ಜಾಗಿಂಗ್, ಈಜು, ಸೈಕ್ಲಿಂಗ್ ಇತ್ಯಾದಿ. ಕನಿಷ್ಠ ದಿನಕ್ಕೆ 30 ನಿಮಿಷಗಳ ದೈಹಿಕ ಚಟುವಟಿಕೆಗಳು ರಕ್ತಪರಿಚಲನೆಯನ್ನು ಹೆಚ್ಚಿಸಿ ಹೃದಯ ಸ್ನಾಯುಗಳನ್ನು ಬಲಗೊಳಿಸುತ್ತದೆ. ಜತೆಗೆ ದೇಹತೂಕವನ್ನು ನಿಯತವಾಗಿ ನಿರ್ವಹಿಸುವುದು ಕೂಡಾ ಹೃದಯ ಆರೋಗ್ಯಕ್ಕೆ ಪೂರಕ ಎನ್ನುವುದು ಅವರ ಅಭಿಮತ.
ಕೃಪೆ: hindustantimes.com