ನಿಮ್ಮ ಉಗುರುಗಳು ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತವೆ?
ಸಾಂದರ್ಭಿಕ ಚಿತ್ರ | Photo: NDTV
ನಿಮ್ಮ ಉಗುರುಗಳು ನಿಮ್ಮ ದೇಹದ ಸೌಂದರ್ಯಮೌಲ್ಯವನ್ನು ಮಾತ್ರ ಹೇಳುವುದಿಲ್ಲ; ಬದಲಾಗಿ ನಿಮ್ಮ ದೇಹದೊಳಗೆ ಏನು ನಡೆಯುತ್ತಿದೆ ಎನ್ನುವುದರ ಮಾರ್ಗಸೂಚಿಯೂ ಹೌದು. ಇದು ವಿಟಮಿನ್ ಕೊರತೆ, ಕಾಯಿಲೆಗಳು ಸೇರಿದಂತೆ ಆರೋಗ್ಯ ಸಮಸ್ಯೆಗಳ ಸೂಚಕ.
ಇವು ಪ್ರಾಯೋಗಿಕವಾಗಿ ಕೂಡಾ ನಿಮ್ಮ ಸ್ಪರ್ಶದ ಸಂವೇದನೆಗೂ ನೆರವಾಗುತ್ತವೆ ಹಾಗೂ ನಿಮ್ಮ ಬೆರಳುಗಳು ಮತ್ತು ಪಾದವನ್ನು ಗಾಯಗಳಿಂದ ರಕ್ಷಿಸುತ್ತವೆ. ಇದರಿಂದಾಗಿ ನಿಮ್ಮ ಉಗುರಿನ ಆರೋಗ್ಯ ದೇಹದ ಇತರ ಭಾಗಗಳ ಆರೋಗ್ಯದಂತೆಯೇ ಪ್ರಮುಖ ಎನ್ನುವುದು ನಿರ್ವಿವಾದ.
"ಆರೋಗ್ಯಕರ ಉಗುರುಗಳು ಸಾಮಾನ್ಯವಾಗಿ ಗುಲಾಬಿ ಬಣ್ಣದ್ದಾಗಿರುತ್ತದೆ ಹಾಗೂ ತುದಿಯಲ್ಲಿ ಸ್ವಲ್ಪ ಬಾಗಿರುತ್ತದೆ. ಇದರ ಬಣ್ಣ, ಸಂರಚನೆ ಮತ್ತು ಆಕೃತಿಯ ಬದಲಾವಣೆಯು ಪೌಷ್ಟಿಕಾಂಶ ಕೊರತೆ, ಸೋಂಕು ಮತ್ತು ಇತರ ಆರೋಗ್ಯ ಸಮಸ್ಯೆಗಳ ಸೂಚಕವಾಗಿರುತ್ತದೆ. ಪೌಷ್ಟಿಕಾಂಶ ತಜ್ಞೆ ಅಂಜಲಿ ಮುಖರ್ಜಿ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ನಿಮ್ಮ ಉಗುರುಗಳು ಹೇಗೆ ಆರೋಗ್ಯದ ಪ್ರತಿಬಿಂಬ ಎಂದು ಬರೆದಿದ್ದಾರೆ. ಉದಾಹರಣೆಗೆ ಅಸಹಜ ಉಗುರಿನ ಆಕೃತಿ ಮೌಲಿಕವಾದ ಆರೋಗ್ಯದ ಒಳನೋಟ ನೀಡಬಲ್ಲದು.
ಉಗುರು ವಿರುದ್ಧ ದಿಕ್ಕಿನಲ್ಲಿ ಬಾಗಿದ್ದರೆ ಅದು ತೀವ್ರತರ ಕಬ್ಬಿಣದ ಅಂಶ ಕೊರತೆ ಅಥವಾ ಅನೀಮಿಯಾದ ಲಕ್ಷಣವನ್ನು ಸೂಚಿಸುತ್ತದೆ. ಒಳಗೆಯೇ ಸುರುಳಿಯಾಕಾರದಲ್ಲಿ ಬೆಳೆಯುವುದು ಉಸಿರಾಟ ಅಥವಾ ಹೃದಯ ಸಮಸ್ಯೆಯ ಲಕ್ಷಣ. ಉಬ್ಬಿದ ಎಲುಬುಗಳು ಉಸಿರಾಟದ ತೊಂದರೆಯನ್ನು ಸೂಚಿಸುತ್ತವೆ.
ಚೌಕ ಹಾಗೂ ಅಗಲದ ಉಗುರುಗಳು ಹಾರ್ಮೋನ್ ಕೊರತೆಯ ಸೂಚಕವಾಗಿದ್ದು, ಚಪ್ಪಟೆ ಉಗುರುಗಳು ವಿಟಮಿನ್ ಬಿ12 ಕೊರತೆಯ ಸೂಚಕ. ಮಾಂಸ, ಹೈನು ಉತ್ಪನ್ನಗಳು , ಮೊಟ್ಟೆಯಂಥ ಆಹಾರವನ್ನು ಹೆಚ್ಚು ಸೇವಿಸುವ ಮೂಲಕ ಇದನ್ನು ಬಗೆಹರಿಸಬಹುದು. ಜತೆಗೆ ಎಲೆ ತರಕಾರಿ ಮತ್ತು ಬೀಜಗಳು ಕೂಡಾ ಉತ್ತಮ ಸಿಪ್ಪೆ ಏಳುವ ಉಗುರು ನಿಮ್ಮ ಕೆರಾಟಿನ್ಗೆ ಹಾನಿಯಾಗಿರುವುದನ್ನು ಸೂಚಿಸುತ್ತದೆ. ಬಿಸಿ ಗಾಳಿ, ನೀರು ಅಥವಾ ತಂಪು ಹವೆಗೆ ಒಡ್ಡಿಕೊಳ್ಳುವುದು, ಉಗುರು ಹಾನಿಗೆ ಕಾರಣವಾಗಬಹುದು. ಇದು ದೇಹದ ಒಮೆಗಾ 3- ಕೊಬ್ಬಿನ ಆ್ಯಸಿಡ್ ಕೊರತೆಯನ್ನು ತೋರಿಸುತ್ತದೆ.
ಕೃಪೆ: indiatoday.in