ಕೆಂಗಣ್ಣು ಗುಣವಾದ ಬಳಿಕ ಕಣ್ಣಿನ ಆರೋಗ್ಯಕ್ಕೆ ನೀವು ಮಾಡಬೇಕಾದ್ದೇನು?
ಸಾಂದರ್ಭಿಕ ಚಿತ್ರ
ದೇಶದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಕೆಂಗಣ್ಣು ಸಮಸ್ಯೆ ವ್ಯಾಪಕವಾಗಿ ಹರಡುತ್ತಿದೆ. ಮಳೆಗಾಲದ ತೇವಾಂಶಯುಕ್ತ ಹವೆ ಈ ಬ್ಯಾಕ್ಟೀರಿಯಾ ಬೆಳೆಯಲು ಮತ್ತು ಹರಡಲು ಅನುಕೂಲಕರ ವಾತಾವರಣ. ಇದು ಸಾಮಾನ್ಯವಾಗಿ ತೀವ್ರವಾಗಿ ಹರಡುವ ಸಾಮರ್ಥ್ಯ ಹೊಂದಿದ್ದು, ಇದರ ಲಕ್ಷಣಗಳು ಸಾಮಾನ್ಯವಾಗಿ ನಾಲ್ಕು ದಿನಗಳ ಕಾಲ ಕಾಣಿಸುತ್ತವೆ. ಕಣ್ಣು ಕೆಂಪಾಗುವುದು, ತುರಿಕೆ, ಕಣ್ಣು ನೋವು, ಕಣ್ಣಿನಲ್ಲಿ ನೀರು ಸುರಿಯುವುದು, ಕಣ್ಣಿನಲ್ಲಿ ಹಿಕ್ಕೆ, ದೃಷ್ಟಿ ಮಂದವಾಗುವುದು, ಬಾವು ಹಾಗೂ ಬೆಳಕಿನ ಸಂವೇದನಾಶೀಲತೆ ಸಾಮಾನ್ಯ ಲಕ್ಷಣಗಳು. ಈ ಸಮಸ್ಯೆಯಿಂದ ಶೀಘ್ರ ಗುಣಮುಖರಾಗುವುದು ಹೇಗೆ ಎನ್ನುವ ಕೆಲ ಸಲಹೆಗಳು ಇಲ್ಲಿವೆ:
ಹೀಗೆ ಮಾಡಿ
* ಅಸ್ವಸ್ಥತೆ ಕಡಿಮೆ ಮಾಡಲು ಕೋಲ್ಡ್ ಕಂಪ್ರೆಸ್ ಬಳಸಿ
* ಕಣ್ಣಿನ ಸೋಂಕಿನ ಕಾರಣದಿಂದ ಹಿಗ್ಗೆ ಬರಬಹುದು. ಬೆಚ್ಚಗಿನ ಬಟ್ಟೆಯನ್ನು ಬಳಸಿ ಇದನ್ನು ತೆಗೆಯಿರಿ ಹಾಗೂ ಕಣ್ಣುಗಳನ್ನು ಸ್ವಚ್ಛಗೊಳಿಸಿ
* ವೈದ್ಯರು ಸಲಹೆ ಮಾಡಿದಂತೆ ಕಣ್ಣಿನ ಡ್ರಾಪ್ ಹಾಗೂ ಔಷಧಿಗಳನ್ನು ಬಳಸಿ
ಹೀಗೆ ಮಾಡಬೇಡಿ
* ಕಣ್ಣು ಸ್ಪರ್ಶಿಸಬೇಡಿ ಅಥವಾ ಉಜ್ಜಬೇಡಿ
* ಸಾಧ್ಯವಾದಷ್ಟೂ ಕಣ್ಣಿಗೆ ಮೇಕಪ್ ಧರಿಸಬೇಡಿ
* ಸಾಮಾನ್ಯವಾಗಿ ಸಿಗುವ ಐ ಡ್ರಾಪ್ ಬಳಸಬೇಡಿ
* ಈಜು ಬೇಡ
* ನಿಮ್ಮ ವೈಯಕ್ತಿಕ ಬಳಕೆ ಸಾಮಗ್ರಿಗಳನ್ನು ಹಂಚಿಕೊಳ್ಳಬೇಡಿ.
ಕೃಪೆ: ndtv.com