Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಜ್ವರ, ನೋವು ಮತ್ತು ಅಲರ್ಜಿಗಳ...

ಜ್ವರ, ನೋವು ಮತ್ತು ಅಲರ್ಜಿಗಳ ಚಿಕಿತ್ಸೆಗೆ ಬಳಸುವ 156 ಸಂಯೋಜಿತ ಔಷಧಿಗಳನ್ನು ಸರಕಾರ ನಿಷೇಧಿಸಿದ್ದೇಕೆ?

ವಾರ್ತಾಭಾರತಿವಾರ್ತಾಭಾರತಿ25 Aug 2024 3:35 PM IST
share
ಜ್ವರ, ನೋವು ಮತ್ತು ಅಲರ್ಜಿಗಳ ಚಿಕಿತ್ಸೆಗೆ ಬಳಸುವ 156 ಸಂಯೋಜಿತ ಔಷಧಿಗಳನ್ನು ಸರಕಾರ ನಿಷೇಧಿಸಿದ್ದೇಕೆ?

ಹೊಸದಿಲ್ಲಿ: ಜ್ವರ,ನೋವು ಮತ್ತು ಅಲರ್ಜಿಗಳಿಗೆ ಒಟ್ಟು ಪರಿಹಾರದ ಭರವಸೆ ನೀಡುವ ಸಂಯೋಜಿತ ಔಷಧಿಗಳನ್ನು ನೀವು ತೆಗೆದುಕೊಳ್ಳುತ್ತಿದ್ದರೆ ಅವು ಹೆಚ್ಚು ಪರಿಣಾಮಕಾರಿ ಆಗದಿರಬಹುದು.ಇದೇ ಕಾರಣದಿಂದ ಸರಕಾರವು ಚೆಸ್ಟನ್ ಕೋಲ್ಡ್‌ನಂತಹ ಜನಪ್ರಿಯ ಜ್ವರದ ಔಷಧಿ ಮತ್ತು ಫೋರಾಸೆಟ್‌ನಂತಹ ನೋವಿನ ಔಷಧಿಗಳು ಸೇರಿದಂತೆ ಸಕ್ರಿಯ ಘಟಕಗಳ ಮಿಶ್ರಣವನ್ನು ಒಳಗೊಂಡ 156 ಫಿಕ್ಸೆಡ್ ಡೋಸ್ ಕಾಂಬಿನೇಷನ್(ಎಫ್‌ಡಿಸಿ) ಔಷಧಿಗಳನ್ನು ನಿಷೇಧಿಸಿದೆ.

ಈ ಸಂಯೋಜನೆಗಳನ್ನು ತರ್ಕರಹಿತ ಮತ್ತು ಯಾವುದೇ ಚಿಕಿತ್ಸಕ ಪ್ರಯೋಜನವಿಲ್ಲದ ಔಷಧಿಗಳೆಂದು ಬಣ್ಣಿಸಿರುವ ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ವಾರ ಅಧಿಸೂಚನೆಯ ಮೂಲಕ ತಕ್ಷಣವೇ ಜಾರಿಗೆ ಬರುವಂತೆ ಅವುಗಳನ್ನು ನಿಷೇಧಿಸಿದೆ.

ಕೆಲವು ನಿಷೇಧಿತ ಔಷಧಿಗಳು:

ನಿಷೇಧಿತ ಔಷಧಿಗಳಲ್ಲಿ ಜಠರಗರುಳು ಸಮಸ್ಯೆಗಳ ಚಿಕಿತ್ಸೆಗೆ ಬಳಸುವ ಕಿಣ್ವಗಳ ಹಲವಾರು ಸಂಯೋಜನೆಗಳು,ಅಲರ್ಜಿ ವಿರೋಧಿ ಔಷಧಿಗಳ ಸಂಯೋಜನೆಗಳು ಮತ್ತು ಚರ್ಮದ ಸಮಸ್ಯೆಗಳ ಚಿಕಿತ್ಸೆಗೆ ಬಳಸುವ ಸಂಯೋಜನೆಗಳು ಸೇರಿವೆ.

ನೇಸಲ್ ಡಿಕಂಜೆಸ್ಟಂಟ್(ಮೂಗು ಕಟ್ಟುವಿಕೆ ನಿವಾರಕ),ಲೋಳೆಯನ್ನು ತೆಳ್ಳಗಾಗಿಸುವ ಸಿರಪ್‌ಗಳು ಮತ್ತು ಪ್ಯಾರಾಸಿಟಮಲ್ ಒಳಗೊಂಡಿರುವ ಲಿವೋಸಿಟ್ರಿಜನ್‌ನಂತಹ ಅಲರ್ಜಿ ವಿರೋಧಿ ಸಂಯೋಜನೆಗಳನ್ನು ನಿಷೇಧಿಸಲಾಗಿದೆ. ನಿಷೇಧಿತ ಪಟ್ಟಿಯಲ್ಲಿ ಮೊಡವೆ ಕ್ರೀಮ್ ಅಥವಾ ಅಯೋಡಿನ್ ದ್ರಾವಣದೊಂದಿಗಿನ ಆ್ಯಂಟಿ ಬಯಾಟಿಕ್‌ಗಳ ಸಂಯೋಜನೆಗಳೂ ಸೇರಿವೆ.

ನಿಷೇಧಿತ ಪೂರಕಗಳ ಸಂಯೋಜನೆಯು ಅಲೋವೆರಾದೊಂದಿಗೆ ಮೆಂಥಾಲ್, ಔಷಧೀಯ ಸಾಬೂನಿನ ರೂಪದಲ್ಲಿ ಅಲೋವೆರಾದೊಂದಿಗೆ ವಿಟಮಿನ್ ಇ, ಸುಟ್ಟಗಾಯಗಳಿಗೆ ಬಳಸುವ ನಂಜು ನಿರೋಧಕ ಘಟಕದ ಜೊತೆಗಿನ ಸಿಲ್ವರ್ ಸಲ್ಫಾಡಾಯಝಿನ್, ಅಲೋ ಸಾರ ಮತ್ತು ವಿಟಮಿನ್, ಚರ್ಮದ ಸಮಸ್ಯೆಗಳಿಗೆ ಬಳಸುವ ಅಲೋ ಮತ್ತು ನೈಸರ್ಗಿಕ ವಸ್ತುವಿನೊಂದಿಗಿನ ಕ್ಯಾಲಮೈನ್ ಲೋಶನ್ ಇವುಗಳನ್ನು ಒಳಗೊಂಡಿದೆ.

ವಾಕರಿಕೆಯನ್ನು ತಡೆಯುವ ಔಷಧಿಯೊಂದಿಗೆ ಮೈಗ್ರೇನ್ ಔಷಧಿಗಳ ಸಂಯೋಜನೆ, ಸಾಮಾನ್ಯವಾಗಿ ಮುಟ್ಟಿನ ಸೆಳೆತಗಳಿಗೆ ಬಳಕೆಯಾಗುವ ಮೆಫೆನಾಮಿಕ್ ಆಮ್ಲ, ಸಾಮಾನ್ಯ ಆ್ಯಂಟಿ-ಫೈಬ್ರೊಟಿಕ್ ಔಷಧಿ ಟ್ರಾನೆಕ್ಸಾಮಿಕ್ ಆಮ್ಲ ಮತ್ತು ರಕ್ತನಾಳಗಳು ಹಾಗೂ ಸ್ನಾಯುಗಳನ್ನು ಸಡಿಲಿಸುವ ಔಷಧಿಯೊಂದಿಗೆ ವಯಾಗ್ರಾ-ಸಿಲ್ಡೆನಾಫಿಲ್‌ನಲ್ಲಿಯ ಸಕ್ರಿಯ ಘಟಕಾಂಶಗಳ ಸಂಯೋಜನೆ ಇವೂ ನಿಷೇಧಿತ ಪಟ್ಟಿಯಲ್ಲಿ ಸೇರಿವೆ.

ಏನಿದು ಫಿಕ್ಸೆಡ್ ಡೋಸ್ ಕಾಂಬಿನೇಷನ್?:

ಎಫ್‌ಡಿಸಿ ಅಥವಾ ಸ್ಥಿರ ಡೋಸ್ ಸಂಯೋಜನೆಗಳು ಒಂದೇ ಮಾತ್ರೆ,ಕ್ಯಾಪ್ಸೂಲ್ ಅಥವಾ ಡೋಸ್‌ನಲ್ಲಿ ಎರಡು ಅಥವಾ ಹೆಚ್ಚಿನ ಸಕ್ರಿಯ ಘಟಕಗಳನ್ನು ಒಳಗೊಂಡಿರುತ್ತವೆ. ಇಂತಹ ಸಂಯೋಜಿತ ಔಷಧಿಗಳು ಕ್ಷಯ ಮತ್ತು ಮಧುಮೇಹದಂತಹ ರೋಗಿಗಳಿಗೆ ಕಡಿಮೆ ಮಾತ್ರೆಗಳನ್ನು ಸೇವಿಸಲು ನೆರವಾಗುತ್ತವೆ,ಆದರೆ ಇವು ರೋಗಿಗಳು ಅಗತ್ಯವಿಲ್ಲದ ಔಷಧಿಗಳನ್ನೂ ಸೇವಿಸುವಂತೆ ಮಾಡುತ್ತವೆ.

ಈ ಎಫ್‌ಡಿಸಿಗಳು ಒಟ್ಟಿಗೆ ಚೆನ್ನಾಗಿ ಕಾರ್ಯ ನಿರ್ವಹಿಸದ ಅಥವಾ ರೋಗಿಗಳು ಸಾಮಾನ್ಯವಾಗಿ ಒಟ್ಟಿಗೆ ಸೇವಿಸುವ ಅಗತ್ಯವಿಲ್ಲದ ಔಷಧಿಗಳನ್ನು ಒಳಗೊಂಡಿರುವ ಕಾರಣದಿಂದಾಗಿ ಇವುಗಳನ್ನು ಸರಕಾರವು ನಿಷೇಧಿಸಿದೆ.

ನಿಷೇಧಿತ ಸಂಯೋಜನೆಗಳಲ್ಲಿಯ ಔಷಧಿಗಳು ಪ್ರತ್ಯೇಕವಾಗಿ ಅನುಮೋದನೆಯನ್ನು ಹೊಂದಿವೆ,ಹೀಗಾಗಿ ವಿವಿಧ ರಾಜ್ಯ ಪರವಾನಿಗೆ ಪ್ರಾಧಿಕಾರಗಳು ಇಂತಹ ಹೆಚ್ಚಿನ ಸಂಯೋಜನೆಗಳಿಗೆ ಯಾವುದೇ ಕ್ಲಿನಿಕಲ್ ಟ್ರಯಲ್ ಇಲ್ಲದೆ ಅನುಮತಿಯನ್ನು ನೀಡಿದ್ದವು.

2019ರ ಹೊಸ ಔಷಧಿಗಳು ಮತ್ತು ಕ್ಲಿನಿಕಲ್ ಟ್ರಯಲ್ ನಿಯಮಗಳು ಎಫ್‌ಡಿಸಿಗಳನ್ನು ನೂತನ ಔಷಧಿಗಳೆಂದು ಪರಿಗಣಿಸಬೇಕು ಮತ್ತು ಕೇಂದ್ರೀಯ ಔಷಧಿ ನಿಯಂತ್ರಕರಿಂದ ಅನುಮೋದನೆಯನ್ನು ಪಡೆದುಕೊಳ್ಳಬೇಕು ಎನ್ನುವುದನ್ನು ಸ್ಪಷ್ಟಪಡಿಸಿವೆ. ಮಾರುಕಟ್ಟೆಯಲ್ಲಿ ಇಂತಹ ಅತಾರ್ಕಿಕ ಸಂಯೋಜನೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಇದು ನೆರವಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ಹೇಳಿದರು.

ಕಂಪನಿಗಳು ಈ 156 ಔಷಧಿಗಳ ತಯಾರಿಕೆ, ದಾಸ್ತಾನು ಮತ್ತು ಮಾರಾಟವನ್ನು ತಕ್ಷಣ ನಿಲ್ಲಿಸಬೇಕು ಎಂದು ಸರಕಾರದ ಅಧಿಸೂಚನೆಯು ತಿಳಿಸಿದೆಯಾದರೂ ಇನ್ನೂ ಸ್ವಲ್ಪ ಸಮಯ ಈ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ‘ಇಂತಹ ಆದೇಶದ ಬಳಿಕ ಸಾಮಾನ್ಯವಾಗಿ ಕಂಪನಿಗಳು ನ್ಯಾಯಾಲಯದ ಮೆಟ್ಟಿಲನ್ನೇರುವುದನ್ನು ಮತ್ತು ಮಾರುಕಟ್ಟೆಯಲ್ಲಿ ಈಗಗಲೇ ದಾಸ್ತಾನಿರುವ ಔಷಧಿಗಳನ್ನು ಮಾರಾಟ ಮಾಡಲು ನ್ಯಾಯಾಲಯ ಅವುಗಳಿಗೆ ಅವಕಾಶ ನೀಡುವುದನ್ನು ನಾವು ನೋಡಿದ್ದೇವೆ’ ಎಂದು ಅಧಿಕಾರಿ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X