ಇಸ್ರೇಲ್ ವಿರುದ್ಧ ಯುದ್ಧಕ್ಕೆ ಸಿದ್ಧ | ಇರಾಕ್ನ ಸಶಸ್ತ್ರ ಗುಂಪು ಎಚ್ಚರಿಕೆ
PC : NDTV
ಬಗ್ದಾದ್ : ಲೆಬನಾನ್ನಲ್ಲಿ ಯುದ್ಧ ಆರಂಭವಾದರೆ ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಹೋರಾಡಲು ಸಿದ್ಧ ಎಂದು ಇರಾಕ್ನ ಸಶಸ್ತ್ರ ಹೋರಾಟಗಾರರ ಗುಂಪು ಗುರುವಾರ ಎಚ್ಚರಿಕೆ ನೀಡಿದೆ.
ಒಂದು ವೇಳೆ ಲೆಬನಾನ್ನಲ್ಲಿ ಪೂರ್ಣ ಪ್ರಮಾಣದ ಯುದ್ಧ ನಡೆದರೆ, ಉಲ್ಬಣಕ್ಕೆ ಪ್ರತಿಯಾಗಿ ಉಲ್ಬಣ ಪ್ರಕ್ರಿಯೆ ನಡೆಯಲಿದೆ. ಈ ಕುರಿತು ವಿಚಾರ ವಿಮರ್ಶೆ ನಡೆಸಲು ತಜ್ಞರನ್ನು ಮತ್ತು ಸಲಹೆಗಾರರನ್ನು ಲೆಬನಾನ್ಗೆ ಈಗಾಗಲೇ ರವಾನಿಸಲಾಗಿದೆ ಎಂದು `ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್' ಗುಂಪಿನ ಉನ್ನತ ಕಮಾಂಡರ್ ಹೇಳಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ಮತ್ತು ಲೆಬನಾನ್ನ ಹಿಜ್ಬುಲ್ಲಾ ನಡುವಿನ ಪ್ರಮುಖ ಯುದ್ಧವು ಲೆಬನಾನ್ನ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರದು. ಇರಾಕ್ನಲ್ಲಿ ಮತ್ತು ಈ ವಲಯದ ಇತರೆಡೆ ಸಶಸ್ತ್ರ ಗುಂಪುಗಳು ಯುದ್ಧಕ್ಷೇತ್ರ ಪ್ರವೇಶಿಸಲಿವೆ. ಈ ಗುಂಪುಗಳು ಮಿತ್ರರಿಗೆ ತಮ್ಮ ಸಾಮಥ್ರ್ಯ ಮತ್ತು ನಿಷ್ಠೆಯನ್ನು ತೋರಿಸಲು ಬಯಸಿವೆ' ಎಂದು ಇರಾಕ್ನ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Next Story