ಅಮೆರಿಕ: ಜನರ ಗುಂಪಿಗೆ ನುಗ್ಗಿದ ಟ್ರಕ್, 3 ಮಂದಿ ಸಾವು; 9 ಮಂದಿಗೆ ಗಾಯ
ವಾಷಿಂಗ್ಟನ್: ಅಮೆರಿಕದ ಸ್ವಾತಂತ್ರ್ಯ ಸಂಭ್ರಮಾಚರಣೆಗೆ ಸೇರಿದ್ದ ಜನರ ಗುಂಪಿನ ಮೇಲೆ ಟ್ರಕ್ ನುಗ್ಗಿದ್ದರಿಂದ ಮೂವರು ಮೃತಪಟ್ಟು ಇತರ 9 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ನ್ಯೂಯಾರ್ಕ್ ನಗರದ ಕಾರ್ಲಿಯರ್ಸ್ ಹೂಕ್ ಪಾರ್ಕ್ನಲ್ಲಿ ದುರ್ಘಟನೆ ನಡೆದಿದ್ದು ವೇಗವಾಗಿ ಚಲಿಸುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿಗಳ ಮಾರ್ಗಕ್ಕೆ ನುಗ್ಗಿದೆ. ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜನರ ಗುಂಪಿನ ಮೇಲೆ ಟ್ರಕ್ ನುಗ್ಗಿದ್ದರಿಂದ ಮಹಿಳೆ ಮತ್ತು ಆಕೆಯ ಇಬ್ಬರು ಎಳೆಯ ಮಕ್ಕಳು ಸಾವನ್ನಪ್ಪಿದ್ದು ಇತರ 9 ಮಂದಿ ಗಾಯಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಚಾಲಕ ಮದ್ಯದ ಅಮಲಿನಲ್ಲಿದ್ದ ಮತ್ತು ಅಪಘಾತ ನಡೆದ ಬಳಿಕ ತನ್ನ ಕಾರಿನಲ್ಲಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆಗ ಸ್ಥಳೀಯರು ಆತನನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಎನ್ಬಿಸಿ ನ್ಯೂಯಾರ್ಕ್ ಸುದ್ದಿಸಂಸ್ಥೆ ವರದಿ ಮಾಡಿದೆ.
Next Story