ಅಮೆರಿಕ | ದೋಣಿಯಲ್ಲಿ ಬೆಂಕಿ: ಒಬ್ಬ ಮೃತ್ಯು ; 3 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ | PC : PTI
ನ್ಯೂಯಾರ್ಕ್ : ಅಮೆರಿಕದ ಫ್ಲೋರಿಡಾ ರಾಜ್ಯದ ಫೋರ್ಟ್ ಲಾಡರ್ಡೇಲ್ ನಗರದ ಬಂದರಿನಲ್ಲಿ ನಿಲ್ಲಿಸಲಾಗಿದ್ದ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇತರ ಮೂವರು ಗಾಯಗೊಂಡಿದ್ದು ಐದು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಬಂದರಿನ ತೈಲ ಸಂಗ್ರಹಾಗಾರದಲ್ಲಿ ಸಂಭವಿಸಿದ ಸ್ಫೋಟದಿಂದ ಹಾರಿದ ಕಿಡಿಯಿಂದಾಗಿ ಬಳಿಯಿದ್ದ ಒಂದು ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲಿ ಇತರ ದೋಣಿಗಳಿಗೂ ಹರಡಿದ್ದು ಬಂದರಿನಲ್ಲಿದ್ದವರು ಗಾಭರಿಗೊಂಡಿದ್ದು ಕೆಲವರು ನೀರಿಗೆ ಜಿಗಿದಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ.
ಒಬ್ಬನ ಮೃತದೇಹವನ್ನು ನೀರಿನಲ್ಲಿ ಪತ್ತೆಹಚ್ಚಲಾಗಿದ್ದು ಮೂವರು ಅಸ್ವಸ್ಥಗೊಂಡಿದ್ದಾರೆ. 5 ಮಂದಿ ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story