ಲಾಸ್ ಏಂಜಲೀಸ್ | ಟ್ರಂಪ್ ಗೆ ಸೇರಿದ ಹೋಟೆಲ್ ಬಳಿ ಟ್ರಕ್ ಸ್ಪೋಟ : ಓರ್ವ ಮೃತ್ಯು
Photo | Reuters
ಲಾಸ್ ಏಂಜಲೀಸ್: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಸೇರಿದ ಹೋಟೆಲ್ ನ ಹೊರಗಡೆ ಟೆಸ್ಲಾ ಸೈಬರ್ ಟ್ರಕ್ ಸ್ಫೋಟಗೊಂಡು ಕನಿಷ್ಠ ಓರ್ವ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ನ್ಯೂ ಓರ್ಲಿಯನ್ಸ್ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಟ್ರಕ್ ಚಲಾಯಿಸಿ, ಗುಂಡು ಹಾರಿಸಿ 15 ಜನರನ್ನು ಹತ್ಯೆ ಮಾಡಿದ್ದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಲಾಸ್ ವೇಗಾಸ್ ನಲ್ಲಿರುವ ಟ್ರಂಪ್ ಇಂಟರ್ ನ್ಯಾಶನಲ್ ಹೋಟೆಲ್ ನ ಹೊರಗೆ ಟೆಸ್ಲಾ ಸೈಬರ್ ಟ್ರಕ್ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡ ನಂತರ ಓರ್ವ ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಟ್ರಕ್ ಅನ್ನು ಕೊಲೊರಾಡೋದಲ್ಲಿ ಬಾಡಿಗೆಗೆ ಪಡೆಯಲಾಗಿದ್ದು, ಸ್ಫೋಟಕ್ಕೆ ಎರಡು ಗಂಟೆಗಳ ಮೊದಲು ನಗರಕ್ಕೆ ಆಗಮಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಶ್ವೇತಭವನವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ನ್ಯೂ ಓರ್ಲಿಯನ್ಸ್ ನಲ್ಲಿ 15 ಜನರ ಹತ್ಯೆಗೆ ಕಾರಣವಾಗಿದ್ದ ಘಟನೆಗೂ ಈ ಘಟನೆಗೂ ಯಾವುದಾದರೂ ಸಂಬಂಧವಿದೆಯಾ ಎಂದು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕೊಲೊರಾಡೋದಲ್ಲಿ ಟ್ರಕ್ ಅನ್ನು ಯಾರು ಬಾಡಿಗೆಗೆ ಪಡೆದಿದ್ದಾರೆಂದು ಅಧಿಕಾರಿಗಳಿಗೆ ತಿಳಿದಿದೆ. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಅದೇ ವ್ಯಕ್ತಿಯಾ ಎಂದು ಪತ್ತೆ ಹಚ್ಚುವವರೆಗೆ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಲಾಸ್ ವೇಗಾಸ್ ನ ಹಿರಿಯ ಪೊಲೀಸ್ ಅಧಿಕಾರಿ ಶೆರಿಫ್ ಕೆವಿನ್ ಮೆಕ್ ಮಹಿಲ್ ಹೇಳಿದ್ದಾರೆ.