ವಲಸೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಶಪಥ | 18,000 ಭಾರತೀಯರ ಮೇಲೆ ಗಡಿಪಾರಿನ ತೂಗುಕತ್ತಿ
ಡೊನಾಲ್ಡ್ ಟ್ರಂಪ್ | NDTV
ವಾಶಿಂಗ್ಟನ್: ಇನ್ನೊಂದು ತಿಂಗಳೊಳಗೆ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಲಿದ್ದು, ಈಗಾಗಲೇ ಕಠಿಣ ವಲಸೆ ನೀತಿಗಳೂ ಜಾರಿಯಲ್ಲಿವೆ.
ಅಮೆರಿಕ ವಲಸೆ ಮತ್ತು ಸುಂಕ ಜಾರಿ ಇಲಾಖೆ ಸಿದ್ಧಪಡಿಸಿರುವ ಪಟ್ಟಿಯ ಪ್ರಕಾರ, 1.45 ದಶಲಕ್ಷ ಜನರು ಗಡಿಪಾರಿಗೊಳಗಾಗಲಿದ್ದು, ಈ ಪೈಕಿ 18,000 ಮಂದಿ ದಾಖಲೆ ರಹಿತ ಭಾರತೀಯರೂ ಸೇರಿದ್ದಾರೆ.
The Times of India ಸುದ್ದಿ ಸಂಸ್ಥೆ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಅಮೆರಿಕದೊಳಗೆ ಅಕ್ರಮವಾಗಿ ನುಸುಳಲು ಪ್ರಯತ್ನಿಸಿದ ಸುಮಾರು 90,000 ಭಾರತೀಯರನ್ನು ಬಂಧಿಸಲಾಗಿದೆ. ಬಹುತೇಕ ಬಂಧಿತರು ಪಂಜಾಬ್, ಗುಜರಾತ್ ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ಸೇರಿದ್ದಾರೆ ಎನ್ನಲಾಗಿದೆ.
ಆದರೆ, ದಾಖಲೆ ರಹಿತ ವಲಸಿಗರ ಪಟ್ಟಿಯಲ್ಲಿ ಹೋಂಡುರಾಸ್ ಹಾಗೂ ಗ್ವಾಟೆಮಾಲ ಮೇಲ್ಪಂಕ್ತಿಯಲ್ಲಿದ್ದು, ಕ್ರಮವಾಗಿ 2.61 ಲಕ್ಷ ಮಂದಿ ಹಾಗೂ 2.53 ಲಕ್ಷ ಮಂದಿ ದಾಖಲೆ ರಹಿತ ವಲಸಿಗರನ್ನು ಹೊಂದಿವೆ.
Next Story