ಇಸ್ರೇಲ್ಗೆ 26.38 ಬಿಲಿಯ ಡಾಲರ್ ನೆರವು
Photo: PTI
ಇದೇ ಸಂದರ್ಭದಲ್ಲಿ, ಇಸ್ರೇಲ್ಗೆ 26.38 ಬಿಲಿಯ ಡಾಲರ್ (ಸುಮಾರು 2.20 ಲಕ್ಷ ಕೋಟಿ ರೂಪಾಯಿ) ಹಣಕಾಸು ನೆರವು ನೀಡುವ ಪ್ರಸ್ತಾವಕ್ಕೂ ಅಮೆರಿಕ ಸಂಸತ್ನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನುಮೋದನೆ ನೀಡಿದೆ.
ಈ ಪೈಕಿ 9.1 ಬಿಲಿಯ ಡಾಲರ್ (75,867 ಕೋಟಿ ರೂಪಾಯಿ) ಮಾನವೀಯ ಅಗತ್ಯಗಳ ನೆರವು ಆಗಿದೆ. 5.2 ಬಿಲಿಯ ಡಾಲರ್ (43,350 ಕೋಟಿ ರೂಪಾಯಿ) ಮೊತ್ತದಲ್ಲಿ ಇಸ್ರೇಲ್ ಕ್ಷಿಪಣಿಗಳು ಮತ್ತು ರಾಕೆಟ್ ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಬಹುದಾಗಿದೆ. 3.5 ಬಿಲಿಯ ಡಾಲರ್ (29,180 ಕೋಟಿ ರೂಪಾಯಿ)ನಲ್ಲಿ ಸುಧಾರಿತ ಶಸ್ತ್ರಾಸ್ತ್ರಗಳನ್ನು ಖರೀದಿಸಬಹುದಾಗಿದೆ.
ಅಮೆರಿಕದ ನೆರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವಾಗತಿಸಿದ್ದಾರೆ.
ಆದರೆ, ಫೆಲೆಸ್ತೀನ್ ಅಧ್ಯಕ್ಷೀಯ ಕಚೇರಿಯು ಈ ನೆರವನ್ನು ಖಂಡಿಸಿದೆ. ಇದು ಫೆಲೆಸ್ತೀನ್ ಜನತೆಯ ವಿರುದ್ಧದ ‘‘ಅತಿಕ್ರಮಣ’’ವಾಗಿದೆ ಮತ್ತು ‘‘ಯುದ್ಧಕ್ಕೆ ನೀಡುವ ಅಪಾಯಕಾರಿ ಪ್ರಚೋದನೆ’’ಯಾಗಿದೆ ಎಂದು ಅದು ಬಣ್ಣಿಸಿದೆ.
‘‘ಈ ಹಣದಿಂದ ಗಾಝಾ ಪಟ್ಟಿ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಸಾವಿರಾರು ಫೆಲೆಸ್ತೀನ್ ಜನರ ಹೆಣ ಬೀಳುತ್ತದೆ’’ ಎಂದು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ರ ವಕ್ತಾರ ನಬಿಲ್ ಅಬು ರುಡೇನಿಯ ಹೇಳಿದ್ದಾರೆ.