ಈಜಿಪ್ಟ್ ನಲ್ಲಿ ರೈಲುಗಳ ಡಿಕ್ಕಿ 3 ಸಾವು : 29 ಮಂದಿಗೆ ಗಾಯ
PC : AP
ಕೈರೊ : ಈಜಿಪ್ಟ್ ನ ನೈಲ್ ಡೆಲ್ಟಾದಲ್ಲಿ ಶನಿವಾರ ಎರಡು ಪ್ರಯಾಣಿಕ ರೈಲುಗಳು ಮುಖಾಮುಖಿ ಡಿಕ್ಕಿಯಾಗಿದ್ದು ಇಬ್ಬರು ಮಕ್ಕಳ ಸಹಿತ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಇತರ 29 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶರ್ಖಿಯಾ ಪ್ರಾಂತದ ಝಗಾಜಿಗ್ ನಗರದಲ್ಲಿ ಅಪಘಾತ ಸಂಭವಿಸಿದೆ ಎಂದು ರೈಲ್ವೇ ಪ್ರಾಧಿಕಾರ ಹೇಳಿದೆ. ಅಪಘಾತದಲ್ಲಿ ರೈಲಿನ ಬೋಗಿಗಳು ನಜ್ಜುಗುಜ್ಜಾಗಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ. ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು 40 ಮಂದಿ ಗಾಯಗೊಂಡಿರುವುದಾಗಿ ಈಜಿಪ್ಟ್ ನ ಆರೋಗ್ಯ ಸಚಿವಾಲಯ ಹೇಳಿದೆ.
Next Story