ಲೆಬನಾನ್| ವಾಕಿ-ಟಾಕಿ, ಪೇಜರ್ ಸ್ಫೋಟ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 32 ಕ್ಕೆ ಏರಿಕೆ
3,250ಕ್ಕೂ ಹೆಚ್ಚು ಜನರಿಗೆ ಗಾಯ
Photo: AP
ಬೈರೂತ್: ಬೈರೂತ್ ಸೇರಿದಂತೆ ಹಿಜ್ಬುಲ್ಲಾದ ಹಿಡಿತದಲ್ಲಿರುವ ಲೆಬನಾನ್ ನ ಅನೇಕ ಪ್ರದೇಶಗಳಲ್ಲಿ ಸಂಭವಿಸಿರುವ ವಾಕಿ-ಟಾಕಿ, ಪೇಜರ್ ಗಳ ಸ್ಫೋಟದಲ್ಲಿ 32 ಮಂದಿ ಮೃತಪಟ್ಟು, 3,250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಹಿಜ್ಬುಲ್ಲಾ ಸದಸ್ಯರು ಬಳಸುತ್ತಿದ್ದ ವಾಕಿ ಟಾಕಿಗಳು ಸ್ಫೋಟಗೊಂಡು 20 ಮಂದಿ ಮೃತಪಟ್ಟಿರುವ ಘಟನೆ ಬುಧವಾರ ಬೈರೂತ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ 450ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪೇಜರ್ ಸ್ಫೋಟದಲ್ಲಿ 12 ಮಂದಿ ಮೃತಪಟ್ಟು, ಸುಮಾರು 2,800 ಮಂದಿ ಗಾಯಗೊಂಡಿದ್ದ ಬೆನ್ನಿಗೇ ಈ ಸ್ಫೋಟ ಸಂಭವಿಸಿದೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.
ಈ ದಾಳಿಗೆ ಸಂಪೂರ್ಣವಾಗಿ ಇಸ್ರೇಲ್ ಹೊಣೆಯಾಗಿದ್ದು, ಇದರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಸಂಘಟನೆ ಶಪಥ ಮಾಡಿದೆ.
ಪದೇ ಪದೇ ನಡೆಯುತ್ತಿರುವ ಇಂತಹ ದಾಳಿಗಳಿಂದ ಲೆಬನಾನ್ ನಾಗರಿಕರು ಭಯಭೀತರಾಗಿದ್ದು, ಇದರಿಂದ ಇಸ್ರೇಲ್ ಮತ್ತು ಲೆಬನಾನ್ ನಡುವೆ ಪೂರ್ಣಪ್ರಮಾಣದ ಯುದ್ಧ ನಡೆಯಬಹುದು ಎಂಬ ಆತಂಕ ಎದುರಾಗಿದೆ.