45 ನಿರಾಶ್ರಿತರಿದ್ದ ದೋಣಿ ಯೆಮನ್ ಬಳಿ ಮುಳುಗಡೆ
ಸಾಂದರ್ಭಿಕ ಚಿತ್ರ
ಸನಾ : ಕನಿಷ್ಠ 45 ನಿರಾಶ್ರಿತರಿದ್ದ ದೋಣಿಯೊಂದು ಬುಧವಾರ ರಾತ್ರಿ ಯೆಮನ್ನ ತೈಝ್ ಕರಾವಳಿಯಲ್ಲಿ ಮುಳುಗಿದೆ ಮತ್ತು ಕೇವಲ 4 ಮಂದಿ ಬದುಕುಳಿದಿದ್ದಾರೆ ಎಂದು ವಿಶ್ವಸಂಸ್ಥೆ ನಿರಾಶ್ರಿತರ ಏಜೆನ್ಸಿ(ಯುಎನ್ಎಚ್ಸಿಆರ್) ಗುರುವಾರ ಹೇಳಿದೆ.
ಬಲವಾದ ಗಾಳಿ ಮತ್ತು ಮಿತಿಮೀರಿದ ಹೊರೆಯಿಂದ ದೋಣಿ ಮುಳುಗಿದೆ. ಬದುಕುಳಿದವರಿಗೆ ಸಹಾಯ ಮಾಡಲು ಮತ್ತು ರಕ್ಷಣೆ ನೀಡಲು ವಲಸಿಗರಿಗೆ ಸಂಬAಧಿಸಿದ ಅಂತರಾಷ್ಟ್ರೀಯ ಸಂಸ್ಥೆ (ಐಒಎಂ) ಜತೆ ಕಾರ್ಯ ನಿರ್ವಹಿಸುತ್ತಿರುವುದಾಗಿ ಯುಎನ್ಎಚ್ಸಿಆರ್ ಹೇಳಿದೆ. ವಲಸೆಯ ಮಾರ್ಗಗಳಲ್ಲಿ ಸಾವನ್ನಪ್ಪಿದ ಅಥವಾ ಕಾಣೆಯಾದ ವಲಸಿಗರ ಸಂಖ್ಯೆಯನ್ನು ಸಂಗ್ರಹಿಸುವ ಐಒಎಂ, 2014ರಿಂದ ಪೂರ್ವ ಆಫ್ರಿಕಾ ಮತ್ತು ಸೊಮಾಲಿಯಾ ಪರ್ಯಾಯ ದ್ವೀಪಗಳಿಂದ ಗಲ್ಫ್ ದೇಶಗಳಿಗೆ ಪರಾರಿಯಾಗುವ ಪ್ರಯತ್ನದಲ್ಲಿ 1,864 ವಲಸಿಗರು ಸಾವನ್ನಪ್ಪಿರುವ ಅಥವಾ ನಾಪತ್ತೆಯಾಗಿರುವ ಅಂಕಿಅಂಶವನ್ನು ದಾಖಲಿಸಿದೆ.
Next Story