ಸುಡಾನ್: ಅರೆ ಸೇನಾಪಡೆಯ ಫಿರಂಗಿ ದಾಳಿಯಲ್ಲಿ 5 ಮಕ್ಕಳು ಮೃತ್ಯು
ಪೋರ್ಟ್ ಸುಡಾನ್: ಸುಡಾನ್ ನ ದಾರ್ಫುರ್ ರಾಜ್ಯದಲ್ಲಿ ಅರೆ ಸೇನಾಪಡೆಯ ಫಿರಂಗಿ ದಾಳಿಯಲ್ಲಿ ಐವರು ಮಕ್ಕಳು ಸಾವನ್ನಪ್ಪಿದ್ದು ನಾಲ್ವರು ಮಹಿಳೆಯರು ಗಾಯಗೊಂಡಿರುವುದಾಗಿ ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಸುಡಾನ್ ನಲ್ಲಿ 2023ರ ಎಪ್ರಿಲ್‍ನಿಂದ ಸೇನಾಪಡೆ ಹಾಗೂ ಅರೆ ಸೇನಾಪಡೆಯ ನಡುವೆ ಸಂಘರ್ಷ ನಡೆಯುತ್ತಿದೆ. ಉತ್ತರ ದಾರ್ಫುರ್‍ನ ರಾಜಧಾನಿ ಅಲ್-ಫಶರ್ ನಗರದಲ್ಲಿ ಅರೆ ಸೇನಾಪಡೆಯ ಯೋಧರು ನಡೆಸಿದ ಫಿರಂಗಿ ದಾಳಿಯಲ್ಲಿ 6 ವರ್ಷದೊಳಗಿನ ಐವರು ಮಕ್ಕಳು ಸಾವನ್ನಪ್ಪಿದ್ದು ನಾಲ್ವರು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ. ಕಳೆದ ವರ್ಷದ ಮೇ ತಿಂಗಳಿನಿಂದ ಅಲ್-ಫಶರ್ ನಗರದ ಮೇಲೆ ಅರೆ ಸೇನಾಪಡೆ ಮುತ್ತಿಗೆ ಹಾಕಿದೆ. ದಾರ್ಫುರ್ ರಾಜ್ಯದ ಬಹುತೇಕ ಪ್ರದೇಶ ಅರೆ ಸೇನಾಪಡೆಯ ನಿಯಂತ್ರಣದಲ್ಲಿದ್ದರೂ ಅಲ್-ಫಶರ್ ನಗರದ ಮೇಲೆ ಸೇನಾಪಡೆ ನಿಯಂತ್ರಣ ಹೊಂದಿದೆ. ಅಲ್-ಫಶರ್ ಮೇಲೆ ಅರೆ ಸೇನಾಪಡೆ ನಡೆಸಿದ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿದೆ ಎಂದು ಸೇನಾಪಡೆ ಹೇಳಿದೆ.
Next Story