ಕೌಟುಂಬಿಕ ಹಿಂಸೆಯ ಬಗ್ಗೆ ಕರೆ ಮಾಡಿದ್ದ ಮಹಿಳೆಯನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು
ವಾಷಿಂಗ್ಟನ್: ತನ್ನ ಮಾಜಿ ಬಾಯ್ಫ್ರೆಂಡ್ ಕಿರುಕುಳ ನೀಡುತ್ತಿದ್ದಾನೆ ಎಂದು ಕರೆ ಮಾಡಿದ್ದ ಅಮೆರಿಕದ ಮಹಿಳೆಯೊಬ್ಬಳನ್ನು ಪೊಲೀಸರೇ ಗುಂಡಿಕ್ಕಿ ಹತ್ಯೆಗೈದ ಪ್ರಕರಣದ ಬಗ್ಗೆ ಲಾಸ್ಏಂಜಲೀಸ್ ನಗರಾಡಳಿತ ತನಿಖೆ ಆರಂಭಿಸಿರುವುದಾಗಿ ವರದಿಯಾಗಿದೆ.
ಡಿಸೆಂಬರ್ 4ರಂದು ಘಟನೆ ನಡೆದಿದ್ದು ಗುರುವಾರ ಮಹಿಳೆಯ ಕುಟುಂಬದವರು ದೂರು ದಾಖಲಿಸಿದ್ದಾರೆ. 27 ವರ್ಷದ ನಿಯಾನಿ ಫಿನ್ಲ್ಯಾಸನ್ ಎಂಬ ಮಹಿಳೆ ತನ್ನ ಮಾಜಿ ಬಾಯ್ಫ್ರೆಂಡ್ ವಿರುದ್ಧ ದೂರು ದಾಖಲಿಸಿದ್ದಳು. ವಿಚಾರಣೆಗೆಂದು ಪೊಲೀಸರು ಆಕೆಯ ಮನೆಗೆ ತೆರಳಿದಾಗ ಮನೆಯ ಬಾಗಿಲು ತೆರೆದ ನಿಯಾನಿಯ ಕೈಯಲ್ಲಿ ಚೂರಿಯಿತ್ತು. ತಾನು ಮಾಜಿ ಬಾಯ್ಪ್ರೆಂಡ್ನನ್ನು ಕೊಲ್ಲುತ್ತೇನೆ ಎಂದು ಆಕೆ ಮನೆಯೊಳಗೆ ಓಡಿ ಬಾಯ್ಪ್ರೆಂಡ್ನನ್ನು ಚೂರಿಯಿಂದ ಇರಿಯಲು ಪ್ರಯತ್ನಿಸಿದಾಗ ಆಕೆಯನ್ನು ತಡೆಯಲು ಗುಂಡು ಹಾರಿಸಿದಾಗ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಇದೀಗ ನಿಯಾನಿಯ ಕುಟುಂಬದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ.
Next Story