ಅಫ್ಘಾನಿಸ್ತಾನ ಭೂಕಂಪ: 4,000ಕ್ಕೂ ಹೆಚ್ಚು ಮಂದಿ ಮೃತ್ಯು
2,000 ಮನೆಗಳ ನೆಲಸಮ
PHOTO : PTI
ಕಾಬೂಲ್: ಶನಿವಾರ ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಅಪ್ಪಳಿಸಿರುವ ಭೂಕಂಪದಲ್ಲಿ 4,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಇಲ್ಲವೆ ಗಾಯಗೊಂಡಿದ್ದಾರೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ. 6.2 ತೀವ್ರತೆಯೊಂದಿಗೆ ಅಪ್ಪಳಿಸಿದ ಎರಡು ಭೂಕಂಪಗಳಲ್ಲಿ ಸುಮಾರು 2,000 ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ ಎಂದು ಅಫ್ಘಾನಿಸ್ತಾನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹೇಳಿದೆ.
“ನಾವು ಇಲ್ಲಿಯವರೆಗೆ ಸ್ವೀಕರಿಸಿರುವ ದತ್ತಾಂಶಗಳ ಪ್ರಕಾರ, ದುರದೃಷ್ಟವಶಾತ್ ಗಾಯಾಳುಗಳ ಸಂಖ್ಯೆ 4,000 ಅನ್ನು ದಾಟಿದೆ. ನಮ್ಮ ದತ್ತಾಂಶಗಳ ಪ್ರಕಾರ, ಸುಮಾರು 20 ಗ್ರಾಮಗಳಲ್ಲಿ ಅಂದಾಜು 1,980ರಿಂದ 2,000 ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ” ಎಂದು ಅಫ್ಘಾನಿಸ್ತಾನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಮುಲ್ಲಾ ಸೇಕ್ ಕಾಬೂಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ ಹೆರಾತ್ ಪ್ರಾಂತ್ಯ ಹಾಗೂ ಅಕ್ಕಪಕ್ಕದ ಪ್ರದೇಶಗಳಿಗೆ ಭೂಕಂಪವು ಅಪ್ಪಳಿಸಿತು. ಈ ಪೈಕಿ ಮೊದಲ ಭೂಕಂಪವು ಸ್ಥಳೀಯ ಕಾಲಮಾನವಾದ ಬೆಳಗ್ಗೆ 11.10 ಗಂಟೆಗೆ ಸಂಭವಿಸಿತು