ಅಫ್ಘಾನಿಸ್ತಾನ: 24 ಗಂಟೆಗಳೊಳಗೆ ಮೂರು ಬಾರಿ ಭೂಕಂಪನ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಶುಕ್ರವಾರ ಬೆಳಗ್ಗೆ ಅಫ್ಘಾನಿಸ್ತಾನದ ಹಿಂದುಕುಶ್ ಪ್ರಾಂತ್ಯದ ಮೇಲೆ 4.4 ರಿಕ್ಟರ್ ತೀವ್ರತೆಯಲ್ಲಿ ಅಪ್ಪಳಿಸಿದ ಭೂಕಂಪದ ನಂತರ ಕೆಲವೇ ಗಂಟೆಗಳಲ್ಲಿ ಮತ್ತೊಂದು ಭೂಕಂಪವು ಅಫ್ಘಾನಿಸ್ತಾನವನ್ನು ಅಪ್ಪಳಿಸಿದೆ ಎಂದು indiatoday.in ವರದಿ ಮಾಡಿದೆ.
ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರದ ಪ್ರಕಾರ, ಇತ್ತೀಚಿನ ಭೂಕಂಪನವು ಬೆಳಗ್ಗೆ 9.40ಕ್ಕೆ ಸಂಭವಿಸಿದ್ದು, 180 ಕಿಮೀ ಆಳದಲ್ಲಿ ಭೂಕಂಪವು ಕೇಂದ್ರಿತಗೊಂಡಿತ್ತು.
ಇದಕ್ಕೂ ಮುನ್ನ ಬೆಳಗ್ಗೆ 4.51 ನಿಮಿಷಕ್ಕೆ ಮೊದಲ ಭೂಕಂಪನವು ಸಂಭವಿಸಿತು. ಭೂಕಂಪನವು 17 ಕಿಮೀ ಆಳದಲ್ಲಿ ಕೇಂದ್ರೀಕೃತಗೊಂಡಿತ್ತು.
ಇದುವರೆಗೂ ಯಾವುದೇ ಹಾನಿ ಅಥವಾ ಗಾಯಾಳುಗಳ ವರದಿಯಾಗಿಲ್ಲ.
ನಿನ್ನೆ 6.1 ರಿಕ್ಟರ್ ತೀವ್ರತೆ ಹೊಂದಿದ್ದ ಭೂಕಂಪವು ಇದೇ ಪ್ರಾಂತ್ಯದಲ್ಲಿ ಮಧ್ಯಾಹ್ನ 2.50ರ ವೇಳೆ ಸಂಭವಿಸಿತ್ತು. ಈ ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ, ದಿಲ್ಲಿ ಮತ್ತು ಉತ್ತರ ಭಾರತದ ಹಲವು ಭಾಗಗಳು ಹಾಗೂ ಪಾಕಿಸ್ತಾನದ ಲಾಹೋರ್ ನಲ್ಲಿ ಇದರ ಅನುಭವವಾಗಿತ್ತು. ಇದರೊಂದಿಗೆ ಪೂಂಚ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಭಾಗದಲ್ಲೂ ಭೂಮಿ ನಡುಗಿತ್ತು.