ಸುಮಾರು 50 ವರ್ಷಗಳ ಬಳಿಕ ಚಂದ್ರಯಾನಕ್ಕೆ ರಶ್ಯ ಚಾಲನೆ
Photo: NDTV
ಮಾಸ್ಕೊ: ಸುಮಾರು 50 ವರ್ಷಗಳ ಬಳಿಕ ಚಂದ್ರಯಾನಕ್ಕೆ ರಶ್ಯ ಮತ್ತೆ ಚಾಲನೆ ನೀಡಿದ್ದು ಲೂನಾ-25 ಎಂಬ ಗಗನನೌಕೆಯನ್ನು ಶುಕ್ರವಾರ ಚಂದಿರನತ್ತ ರವಾನಿಸಿದೆ.
1976ರಲ್ಲಿ ಅಂದಿನ ಸೋವಿಯತ್ ಒಕ್ಕೂಟ ನಡೆಸಿದ ಚಂದ್ರಯಾನದ ಬಳಿಕ ರಶ್ಯ ನಡೆಸಿರುವ ಪ್ರಥಮ ಯಾನ ಇದಾಗಿದೆ. ಮುಂದಿನ 5 ದಿನಗಳಲ್ಲಿ ಈ ನೌಕೆಯು ಚಂದ್ರನ ಕಕ್ಷೆಯನ್ನು ತಲುಪಲಿದೆ. ಚಂದಿರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವ ಮುನ್ನ ಸರಿಯಾದ ಸ್ಥಳವನ್ನು ಆಯ್ಕೆ ಮಾಡಲು ಮೂರರಿಂದ ಏಳು ದಿನಗಳವರೆಗೆ ಅಲ್ಲೇ ಉಳಿಯಲಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಚಂದಿರನ ದಕ್ಷಿಣ ಧ್ರುವದಲ್ಲಿ ನೌಕೆಯು ಇಳಿಯಲಿದೆ.
ಆಗಸ್ಟ್ 21ರ ವೇಳೆಗೆ ನಮ್ಮ ನೌಕೆಯು ಚಂದಿರನ ದಕ್ಷಿಣ ದ್ರುವದಲ್ಲಿ ಇಳಿಯುವ ನಿರೀಕ್ಷೆಯಿದೆ ಎಂದು ರಶ್ಯ ಬಾಹ್ಯಾಕಾಶ ಯೋಜನೆ `ರೂಸ್ಕಾಮ್ಸ್'ನ ಅಧಿಕಾರಿ ಅಲೆಕ್ಸಾಂಡರ್ ಬ್ಲೊಕಿನ್ ಹೇಳಿದ್ದಾರೆ.
Next Story