ಅಮೆರಿಕದಲ್ಲಿ 18 ದಶಲಕ್ಷ ಟನ್ ಲಿಥಿಯಂ ನಿಕ್ಷೇಪ ಪತ್ತೆ

PC | NDTV
ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಸಾಲ್ಟನ್ ಸರೋವರದ ತಳದಲ್ಲಿ `ಬಿಳಿ ಚಿನ್ನ' ಎಂದೇ ಕರೆಯಲಾಗುವ ಲಿಥಿಯಂ ಬೃಹತ್ ಪ್ರಮಾಣದಲ್ಲಿ ಪತ್ತೆಯಾಗಿದ್ದು ಅಮೆರಿಕದ ಬ್ಯಾಟರಿ ಉದ್ಯಮವನ್ನು ಪರಿವರ್ತಿಸುವ ಮತ್ತು ಶುದ್ಧ ಶಕ್ತಿಯ ಮಹಾತ್ವಾಕಾಂಕ್ಷೆಗಳನ್ನು ಮುನ್ನಡೆಸುವ ಸಾಮಥ್ರ್ಯವನ್ನು ಇದು ಹೊಂದಿದೆ ಎಂದು `ದಿ ಡೈಲಿ ಗ್ಯಲಾಕ್ಸಿ' ವರದಿ ಮಾಡಿದೆ.
ಸರೋವರದಲ್ಲಿ ಸುಮಾರು 18 ದಶಲಕ್ಷ ಟನ್ಗಳಷ್ಟು ಲಿಥಿಯಂ ಇರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಲ್ಲಿ ಲಿಥಿಯಂ ಪ್ರಮುಖ ಅಂಶವಾಗಿದೆ. ವಿದ್ಯುತ್ ವಾಹನಗಳು ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳಿಗೆ ಜಗತ್ತು ಪರಿವರ್ತನೆಗೊಳ್ಳುತ್ತಿರುವ ಸಂದರ್ಭದಲ್ಲೇ ಬೃಹತ್ ಪ್ರಮಾಣದಲ್ಲಿ ಲಿಥಿಯಂ ಪತ್ತೆಯಾಗಿರುವುದು ವಿದೇಶದಿಂದ ಆಮದಾಗುವ ಲಿಥಿಯಂ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ ವಿದ್ಯುತ್ ವಾಹನಗಳ ಉತ್ಪಾದನೆಗೆ ನೆರವಾಗಲಿದೆ ಎಂದು ವರದಿ ಹೇಳಿದೆ.
Next Story