ಅಮೆರಿಕ: ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿಯ ಮೃತದೇಹ ಪತ್ತೆ
Photo: NDTV
ವಾಷಿಂಗ್ಟನ್ : ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿ ರವಿವಾರ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ತಮ್ಮ ಪುತ್ರ ನೀತ್ ಆಚಾರ್ಯ ರವಿವಾರದಿಂದ ನಾಪತ್ತೆಯಾಗಿದ್ದು ಆತನ ಬಗ್ಗೆ ಮಾಹಿತಿಯಿದ್ದರೆ ತಿಳಿಸುವಂತೆ ವಿದ್ಯಾರ್ಥಿಯ ತಾಯಿ ಗೌರಿ ಆಚಾರ್ಯ ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ್ದರು. ನೀತ್ ಆಚಾರ್ಯನನ್ನು ಇಂಡಿಯಾನಾ ರಾಜ್ಯದ ಹ್ಯಾಮಂಡ್ ನಗರದಲ್ಲಿರುವ ಪಡ್ರ್ಯೂ ವಿವಿಯ ಕ್ಯಾಂಪಸ್ ಬಳಿ ರವಿವಾರ ಡ್ರಾಪ್ ಮಾಡಿರುವುದಾಗಿ ಕ್ಯಾಬ್ ಡ್ರೈವರ್ ಮಾಹಿತಿ ನೀಡಿದ್ದ. ಅದರಂತೆ ಪೊಲೀಸರು ತನಿಖೆ ನಡೆಸಿದಾಗ ಪಡ್ರ್ಯೂ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅವರು ಇದೇ ವಿವಿಯಲ್ಲಿ ಅವರು ಕಂಪ್ಯೂಟರ್ ಸೈಯನ್ಸ್ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಯಾಗಿದ್ದರು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಅಧಿಕಾರಿಗಳು ಹಾಗೂ ನೀತ್ ಆಚಾರ್ಯ ಕುಟುಂಬದ ಜತೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯವಿರುವ ಎಲ್ಲಾ ನೆರವನ್ನೂ ಒದಗಿಸಲಾಗುತ್ತಿದೆ ಎಂದು ಚಿಕಾಗೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಹೇಳಿದ್ದಾರೆ.