ಅಮೆರಿಕ: ಟ್ರಂಪ್ ವಿರುದ್ಧ ಪ್ರತಿಭಟನೆ

ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿರುವ ಡೊನಾಲ್ಡ್ ಟ್ರಂಪ್ ಅವರ ಕಾರ್ಯನೀತಿಗಳನ್ನು ವಿರೋಧಿಸಿ ಶನಿವಾರ ವಾಷಿಂಗ್ಟನ್ನಲ್ಲಿ ಸಾವಿರಾರು ಮಂದಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
`ಜನತಾ ರ್ಯಾಲಿ' ಎಂದು ಹೆಸರಿಸಲಾದ ಪ್ರತಿಭಟನೆಯನ್ನು ನಾಗರಿಕ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಗುಂಪುಗಳ ಸಮೂಹ ಆಯೋಜಿಸಿತ್ತು. 2017ರಲ್ಲಿ ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮಹಿಳಾ ರ್ಯಾಲಿ ಆಯೋಜಿಸಿದ್ದ ಸಂಘಟನೆಯೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದೆ.
ಗರ್ಭಪಾತ ಹಕ್ಕು, ಹವಾಮಾನ ಬದಲಾವಣೆ ಸಮಸ್ಯೆ, ವಲಸಿಗರ ಹಕ್ಕುಗಳು, ಬಂದೂಕು ಹಿಂಸಾಚಾರದಿಂದ ಉತ್ತಮ ರಕ್ಷಣೆ ಸೇರಿದಂತೆ ಕೆಲವು ಪ್ರಮುಖ ವಿಷಯಗಳಲ್ಲಿ ಟ್ರಂಪ್ ಹಾಗೂ ಅವರ ರಿಪಬ್ಲಿಕನ್ ಪಕ್ಷ ಹೊಂದಿರುವ ನಿಲುವನ್ನು ವಿರೋಧಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು ಎಂದು ವರದಿಯಾಗಿದೆ.
Next Story