ಗಾಝಾ ಮಕ್ಕಳ ರಕ್ತಪಾತಕ್ಕೆ ಅಮೆರಿಕ ಹೊಣೆ: ಫೆಲೆಸ್ತೀನ್
Photo : PTI
ವಿಶ್ವಸಂಸ್ಥೆ, : ಗಾಝಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಕ್ಕೆ ತಡೆ ನೀಡಿರುವ ಅಮೆರಿಕ ಗಾಝಾದಲ್ಲಿ ಮಕ್ಕಳ ರಕ್ತಪಾತಕ್ಕೆ ಹೊಣೆಯಾಗಿದೆ ಎಂದು ಫೆಲೆಸ್ತೀನಿಯನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಶನಿವಾರ ಹೇಳಿದ್ದಾರೆ.
ಅಮೆರಿಕದ ನಿಲುವು ಆಕ್ರಮಣಕಾರಿ ಮತ್ತು ಅನೈತಿಕವಾಗಿದೆ ಮತ್ತು ಮಾನವೀಯ ಮೌಲ್ಯಗಳು, ಸಿದ್ಧಾಂತಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಖಂಡಿಸಿದ್ದಾರೆ. ಅಮೆರಿಕದ ಕ್ರಮವನ್ನು ಖಂಡಿಸಿರುವ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ `ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಎಲ್ಲಾ ಸದಸ್ಯರು ಬೆಂಬಲಿಸಿದ ನಿರ್ಣಯವನ್ನು ಅಮೆರಿಕದ ವೀಟೊ ತಡೆಯುವುದಾದರೆ ಇದು ನ್ಯಾಯಸಮ್ಮತವೇ.. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪುನರ್ರಚನೆಗೆ ಇದು ಸಕಾಲವಾಗಿದೆ' ಎಂದಿದ್ದಾರೆ.
Next Story