ಅಮೆರಿಕ: ಮತ್ತೊಬ್ಬ ಭಾರತೀಯ ವಿದ್ಯಾರ್ಥಿಯ ಮೃತದೇಹ ಪತ್ತೆ; ಒಂದೇ ತಿಂಗಳಲ್ಲಿ ನಾಲ್ಕನೇ ಪ್ರಕರಣ
ನ್ಯೂಯಾರ್ಕ್: ಅಮೆರಿಕದ ಓಹಿಯೊ ರಾಜ್ಯದ ಕ್ಲೀವ್ಲ್ಯಾಂಡ್ನಲ್ಲಿ ಶುಕ್ರವಾರ ಭಾರತದ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಇದು ಒಂದು ತಿಂಗಳಲ್ಲಿ ವರದಿಯಾಗಿರುವ ಇಂತಹ ನಾಲ್ಕನೇ ಪ್ರಕರಣವಾಗಿದೆ ಎಂದು ನ್ಯೂಯಾರ್ಕ್ನಲ್ಲಿನ ಭಾರತದ ಕಾನ್ಸುಲೇಟ್ ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯ ವಿದ್ಯಾರ್ಥಿ ಉಮಾ ಸತ್ಯಸಾಯಿ ಗದ್ದೆ ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೃತ ವಿದ್ಯಾರ್ಥಿಯ ಕುಟುಂಬದ ಜತೆ ನಿರಂತರ ಸಂಪರ್ಕದಲ್ಲಿದ್ದು ಮೃತದೇಹವನ್ನು ಭಾರತಕ್ಕೆ ಸಾಧ್ಯವಾದಷ್ಟು ಬೇಗ ಕಳುಹಿಸಿಕೊಡಲು ಕ್ರಮ ಕೈಗೊಳ್ಳುತ್ತೇವೆ' ಎಂದು ನ್ಯೂಯಾರ್ಕ್ನ ಕಾನ್ಸುಲೇಟ್ ಜನರಲ್ ಹೇಳಿದ್ದಾರೆ.
Next Story