ಯುರೋಪ್ ದೇಶಗಳಲ್ಲಿ ರಶ್ಯ ವಿರುದ್ಧ ದ್ವೇಷಭಾವನೆ: ಪುಟಿನ್ ಆರೋಪ
Photo : PTI
ಮಾಸ್ಕೋ: ಯುರೋಪಿಯನ್ ದೇಶಗಳು ಅನ್ಯದ್ವೇಷ ಮತ್ತು ರಶ್ಯ ವಿರುದ್ಧದ ಪೂರ್ವಾಗ್ರಹಪೀಡಿತ ಕಾರ್ಯನೀತಿಯನ್ನು ಹೊಂದಿದ್ದು ರಶ್ಯ ವಿರುದ್ಧ ದ್ವೇಷಭಾವನೆ ಹರಡುವ ಅಜೆಂಡಾವನ್ನು ಕಾರ್ಯಗತಗೊಳಿಸುತ್ತಿವೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಟೀಕಿಸಿದ್ದಾರೆ.
ಎರಡನೇ ವಿಶ್ವಯುದ್ಧದ ಸ್ಮಾರಕವನ್ನು ಲೆನಿನ್ಗ್ರಾಡ್ ಪ್ರಾಂತದಲ್ಲಿ ಅನಾವರಣಗೊಳಿಸಿ ಮಾತನಾಡಿದ ಪುಟಿನ್ `ಬಾಲ್ಟಿಕ್ ದೇಶಗಳಲ್ಲಿ(ಶೀತಲ ಸಮರಕ್ಕೂ ಮುನ್ನ ರಶ್ಯದ ಆಡಳಿತದಡಿ ಇದ್ದು, ಈಗ ನೇಟೊ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯತ್ವ ಪಡೆದಿರುವ ಎಸ್ಟೊನಿಯಾ, ಲಾತ್ವಿಯಾ ಮತ್ತು ಲಿಥುವೇನಿಯಾ ದೇಶಗಳು) ಇರುವ ಅಲ್ಪಸಂಖ್ಯಾತ ರಶ್ಯನ್ನರನ್ನು ದ್ವಿತೀಯ ದರ್ಜೆಯ ಪ್ರಜೆಗಳೆಂದು ಕಡೆಗಣಿಸಲಾಗುತ್ತಿದೆ. ಅವರ ಬಹುತೇಕ ಮಾನವ ಹಕ್ಕುಗಳನ್ನು ಕಸಿದುಕೊಳ್ಳಲಾಗಿದ್ದು ವಿಚಾರಣೆಯಿಲ್ಲದೆ ಶಿಕ್ಷಿಸಲಾಗುತ್ತಿದೆ' ಎಂದರು. ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ಬಾಲ್ಟಿಕ್ ದೇಶಗಳು ವಿರೋಧಿಸಿವೆ.
Next Story