ಸರ್ಬಿಯಾ ಸಂಸತ್ನಲ್ಲಿ ಸದಸ್ಯರ ಘರ್ಷಣೆ; ಹೊಗೆ ಬಾಂಬ್ ಎಸೆತ; ಇಬ್ಬರಿಗೆ ಗಾಯ

Image- AP
ಬೆಲ್ಗ್ರೇಡ್: ಸರ್ಬಿಯಾದಲ್ಲಿ ಮಂಗಳವಾರ ಸರಕಾರದ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಒಳಗೆ ಅಶ್ರುವಾಯು ಮತ್ತು ಹೊಗೆ ಬಾಂಬ್ಗಳನ್ನು ಎಸೆದಾಗ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
4 ತಿಂಗಳ ಹಿಂದೆ ಸರ್ಬಿಯಾದಲ್ಲಿ ರೈಲ್ವೇ ನಿಲ್ದಾಣದ ಮೇಲ್ಛಾವಣಿ ಕುಸಿದು 15 ಮಂದಿ ಮೃತಪಟ್ಟಿದ್ದು ಈ ಘಟನೆಯಲ್ಲಿ ಅಧಿಕಾರಿಗಳ ಕರ್ತವ್ಯಲೋಪವನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸುವ ಪ್ರಯತ್ನವಾಗಿ ಸರಕಾರ ವಿವಿಗಳಿಗೆ ಅನುದಾನ ಹೆಚ್ಚಿಸುವ ಮಸೂದೆಯನ್ನು ಸಂಸತ್ನಲ್ಲಿ ಮಂಡಿಸಿದ್ದು ಚರ್ಚೆಯ ಸಂದರ್ಭ ಘರ್ಷಣೆ ಭುಗಿಲೆದ್ದಿದೆ. ವಿರೋಧ ಪಕ್ಷದ ಸಂಸದರು ಅಶ್ರುವಾಯು ಮತ್ತು ಹೊಗೆಬಾಂಬ್ ಸಿಡಿಸಿದಾಗ ಇಬ್ಬರು ಸಂಸದರು ಗಾಯಗೊಂಡಿದ್ದಾರೆ ಎಂದು ಸ್ಪೀಕರ್ ಹೇಳಿದ್ದಾರೆ.
Next Story