ಇಥಿಯೋಪಿಯಾ | ಬಸ್ಸು ನದಿಗೆ ಉರುಳಿ 71 ಮಂದಿ ಮೃತ್ಯು
PC : X/@YoloOliver1
ನೈರೋಬಿ: ದಕ್ಷಿಣ ಇಥಿಯೋಪಿಯಾದ ಸಿದಾಮಾ ರಾಜ್ಯದ ಬೊನಾಝುರಿಯಾ ಪ್ರಾಂತದಲ್ಲಿ ಸಂಭವಿಸಿದ ರಸ್ತೆ ದುರಂತದಲ್ಲಿ ಕನಿಷ್ಠ 71 ಮಂದಿ ಸಾವನ್ನಪ್ಪಿದ್ದು ಇತರ ಇಬ್ಬರು ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಬಸ್ಸಿನಲ್ಲಿ ಎಷ್ಟು ಮಂದಿ ಪ್ರಯಾಣಿಕರಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸು ನದಿಗೆ ಉರುಳಿ ಬಿದ್ದಿದೆ. ಬಸ್ಸಿನ ಅರ್ಧಭಾಗ ನೀರಿನಲ್ಲಿ ಮುಳುಗಿದ್ದು 68 ಪುರುಷರು ಮತ್ತು ಮೂವರು ಮಹಿಳೆಯರು ಮೃತಪಟ್ಟಿದ್ದು ದೃಢಪಟ್ಟಿದೆ.
ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರಲ್ಲಿ ಮುಳುಗಿರುವ ಬಸ್ಸಿನೊಳಗೆ ಇನ್ನೂ ಕೆಲವರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆಯಿದೆ ಎಂದು ಸಿದಾಮಾ ರಾಜ್ಯದ ಸಂಚಾರಿ ನಿಯಂತ್ರಣ ಮತ್ತು ಅಪಘಾತ ತಡೆ ನಿರ್ದೇಶನಾಲಯದ ಮುಖ್ಯ ಇನ್ಸ್ಪೆಕ್ಟರ್ ಡೇನಿಯಲ್ ಸಂಕುರಾ ಹೇಳಿದ್ದಾರೆ.
Next Story