ಬಲೂಚಿಸ್ತಾನದಲ್ಲಿ ಬಾಂಬ್ ಸ್ಫೋಟ; ಕನಿಷ್ಠ 5 ಯೋಧರ ಸಾವು

PC : NDTV
ಪೇಷಾವರ: ಪಾಕಿಸ್ತಾನದ ಪ್ರಕ್ಷುಬ್ಧ ನೈರುತ್ಯ ಪ್ರಾಂತದ ಬಲೂಚಿಸ್ತಾನದಲ್ಲಿ ಭದ್ರತಾ ಪಡೆಯ ಯೋಧರು ಪ್ರಯಾಣಿಸುತ್ತಿದ್ದ ಬಸ್ಸಿನ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ಗಡಿಭದ್ರತಾ ಪಡೆಯ ಕನಿಷ್ಟ 5 ಯೋಧರು ಸಾವನ್ನಪ್ಪಿದ್ದು ಇತರ 22 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಬಲೂಚಿಸ್ತಾನದ ನೋಶ್ಕಿ ಜಿಲ್ಲೆಯಲ್ಲಿ ರವಿವಾರ ಬೆಳಿಗ್ಗೆ ದುರಂತ ನಡೆದಿದೆ. 7 ಬಸ್ಸುಗಳು ಹಾಗೂ ಎರಡು ಕಾರುಗಳಲ್ಲಿ ಗಡಿಭದ್ರತಾ ದಳದ ಸಿಬ್ಬಂದಿ ಪ್ರಯಾಣಿಸುತ್ತಿದ್ದಾಗ ಸ್ಫೋಟಕ ತುಂಬಿದ್ದ ವಾಹನವನ್ನು ಉಗ್ರರು ಯೋಧರಿದ್ದ ಒಂದು ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾರೆ.
ಸ್ಫೋಟದ ತೀವ್ರತೆಗೆ ರಸ್ತೆ ಬದಿ ನಿಲ್ಲಿಸಿದ್ದ ಮತ್ತೊಂದು ಬಸ್ಸಿಗೂ ಹಾನಿಯಾಗಿದೆ. ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಸ್ಫೋಟದ ಹೊಣೆ ವಹಿಸಿಕೊಂಡಿದ್ದು ಬಾಂಬ್ ದಾಳಿಯಲ್ಲಿ ಎರಡು ಬಸ್ಸುಗಳು ಸಂಪೂರ್ಣ ಧ್ವಂಸಗೊಂಡಿದೆ.
Next Story