ಬಾಂಗ್ಲಾದೇಶ | ಚಿನ್ಮಯ್ ದಾಸ್ ಜಾಮೀನು ಅರ್ಜಿ ತಿರಸ್ಕೃತ
ಚಿನ್ಮೋಯ್ ಕೃಷ್ಣ ದಾಸ್ | PC : indiatoday.in
ಢಾಕ : ಇಸ್ಕಾನ್ ನ ಮಾಜಿ ಸದಸ್ಯ, ಹಿಂದು ಸನ್ಯಾಸಿ ಚಿನ್ಮಯ್ ಕೃಷ್ಣದಾಸ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಗ್ಲಾದೇಶದ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.
ದೇಶದ್ರೋಹದ ಆರೋಪದಲ್ಲಿ ಚಿನ್ಮಯ್ ಕೃಷ್ಣದಾಸ್ರನ್ನು ಸ್ಥಳೀಯ ಅಧಿಕಾರಿಗಳು ಬಂಧಿಸಿದ್ದರು. ದಾಸ್ ಅವರ ಪರವಾಗಿ `ಲೆಟರ್ ಆಫ್ ಅಟಾರ್ನಿ'(ಪವರ್ ಆಫ್ ಅಟಾರ್ನಿ) ಇಲ್ಲದಿರುವುದರಿಂದ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದಾಗಿ ಚಿತ್ತಗಾಂಗ್ ಮೆಟ್ರೊಪಾಲಿಟನ್ ಸೆಷನ್ಸ್ ನ್ಯಾಯಾಧೀಶರ ಆದೇಶದಲ್ಲಿ ಉಲ್ಲೇಖಿಸಲಾಗಿದ್ದು ವಿಚಾರಣೆಯನ್ನು ಜನವರಿ 2ಕ್ಕೆ ಮುಂದೂಡಲಾಗಿದೆ.
ದಾಸ್ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿದ್ದ ವಕೀಲ ರಬೀಂದ್ರ ಘೋಷ್ ಯಾವುದೇ ಪವರ್ ಆಫ್ ಅಟಾರ್ನಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.
Next Story