ಹಿಂಸಾಚಾರಕ್ಕೆ ಕಾರಣವಾಗಿದ್ದ ಉದ್ಯೋಗ ಮೀಸಲಾತಿಯನ್ನು ಹಿಂಪಡೆದ ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯ
Photo: PTI
ಢಾಕಾ: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಮಾರಣಾಂತಿಕ ಹಿಂಸಾಚಾರಕ್ಕೆ ಕಾರಣವಾಗಿದ್ದ ವಿವಾದಾಸ್ಪದ ಸರಕಾರಿ ಹುದ್ದೆಗಳಿಗೆ ನೇಮಕಾತಿ ನಿಯಮಗಳನ್ನು ರವಿವಾರ ಹಿಂದೆಗೆದುಕೊಂಡಿರುವ ಸರ್ವೋಚ್ಚ ನ್ಯಾಯಾಲಯವು ತರಗತಿಗಳಿಗೆ ಮರಳುವಂತೆ ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸೂಚಿಸಿದೆ.
ಜು.13ರಿಂದ ಭುಗಿಲೆದ್ದಿರುವ ದೇಶವ್ಯಾಪಿ ಘರ್ಷಣೆಗಳಲ್ಲಿ ಕನಿಷ್ಠ 133 ಜನರು ಮೃತಪಟ್ಟಿದ್ದಾರೆ. ಸರಕಾರದ ಉದ್ಯೋಗ ಮೀಸಲಾತಿ ನೀತಿಯನ್ನು ಮರುಸ್ಥಾಪಿಸಲು ನ್ಯಾಯಾಲಯವು ಕಳೆದ ತಿಂಗಳು ನಿರ್ಧರಿಸಿದ ಬಳಿಕ ಕಳೆದ ವಾರ ಪ್ರತಿಭಟನೆಗಳು ತಾರಕಕ್ಕೇರಿದ್ದವು.
ಗುರುವಾರದಿಂದ ದೇಶವ್ಯಾಪಿ ಅಂತರ್ಜಾಲವನ್ನು ಸ್ಥಗಿತಗೊಳಿಸಿದ್ದು, ಮೊಬೈಲ್ ಡೇಟಾ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಇದು ಎಟಿಎಮ್ಗಳ ಕಾರ್ಯ ನಿರ್ವಹಣೆಯ ಮೇಲೂ ಪರಿಣಾಮವನ್ನುಂಟು ಮಾಡಿದೆ. ಸರಕಾರವು ರವಿವಾರ ಮತ್ತು ಸೋಮವಾರ ಸಾರ್ವಜನಿಕ ರಜೆಯನ್ನು ಘೋಷಿಸಿದ್ದು,ಸರಕಾರಿ ಮತ್ತು ಖಾಸಗಿ ಕಚೇರಿಗಳು ಮುಚ್ಚಲ್ಪಟ್ಟಿವೆ.
Next Story