ಭೂತಾನ್: ಪ್ರವಾಹದಲ್ಲಿ ಕೊಚ್ಚಿಹೋದ ಜಲವಿದ್ಯುತ್ ಸ್ಥಾವರ; 20 ಮಂದಿ ನಾಪತ್ತೆ
ಸಾಂದರ್ಭಿಕ ಚಿತ್ರ | Photo: NDTV
ಕಠ್ಮಂಡು : ಭೂತಾನ್ನಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಸಣ್ಣ ಜಲವಿದ್ಯುತ್ ಸ್ಥಾವರ ಕೊಚ್ಚಿಹೋಗಿದ್ದು ಸುಮಾರು 20 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಭೂತಾನ್ನ ಪೂರ್ವದಲ್ಲಿನ ಗ್ರಾಮವೊಂದರಲ್ಲಿರುವ ಯುಂಗಿಚ್ಚು ಜಲವಿದ್ಯುತ್ ಸ್ಥಾವರದ ಒಂದು ಭಾಗ ನೆರೆಯಲ್ಲಿ ಕೊಚ್ಚಿಹೋಗಿದೆ. ಸ್ಥಾವರದ ಪ್ರಧಾನ ಭಾಗ ಸುರಕ್ಷಿತವಾಗಿದೆ. ಆದರೆ ಸ್ಥಾವರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 20 ಮಂದಿ ನಾಪತ್ತೆಯಾಗಿದ್ದು ಅವರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮಳೆಯ ನಡುವೆ ಮುಂದುವರಿದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದು ಅತ್ಯಂತ ಘೋರ ದುರಂತವಾಗಿದ್ದು ನಾಪತ್ತೆಯಾದವರ ಪತ್ತೆ ಕಾರ್ಯ ತ್ವರಿತಗೊಳಿಸುವಂತೆ ಪ್ರಧಾನಿ ಲೊಟಯ್ ತ್ಸೆರಿಂಗ್ ಸೂಚಿಸಿದ್ದಾರೆ ಎಂದು ವರದಿ ಹೇಳಿದೆ.
Next Story